ವಾಟ್ಸಾಪ್ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್, ಮೆಟಾ ನೀತಿ ಮುಖ್ಯಸ್ಥ ರಾಜೀವ್ ರಾಜೀನಾಮೆ ವಾಟ್ಸಾಪ್ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ ಮತ್ತು ಮೆಟಾ ಸಾರ್ವಜನಿಕ ನೀತಿ ಮುಖ್ಯಸ್ಥ ರಾಜೀವ್ ಅಗರ್ವಾಲ್ ಅವರು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪ್ರಮುಖ ಮೆಟಾ ಮಂಗಳವಾರ... ನವದೆಹಲಿ: ವಾಟ್ಸಾಪ್ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ ಮತ್ತು ಮೆಟಾ ಸಾರ್ವಜನಿಕ ನೀತಿ ಮುಖ್ಯಸ್ಥ ರಾಜೀವ್ ಅಗರ್ವಾಲ್ ಅವರು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪ್ರಮುಖ ಮೆಟಾ ಮಂಗಳವಾರ ತಿಳಿಸಿದೆ.ಮೆಟಾ ಜಗತ್ತಿನಾದ್ಯಂತ 11,000 ಉದ್ಯೋಗಿಗಳನ್ನು ವಜಾಗೊಳಿಸಿದ ಒಂದು ವಾರದಲ್ಲಿಯೇ ಈ ಬೆಳವಣಿಗೆ ನಡೆದಿದೆ.ಪ್ರಸ್ತುತ ಭಾರತದಲ್ಲಿ ವಾಟ್ಸಾಪ್ ಸಾರ್ವಜನಿಕ ನೀತಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಶಿವನಾಥ್ ತುಕ್ರಾಲ್ ಅವರಿಗೆ ಕಂಪನಿಯು ಮೆಟಾ ಇಂಡಿಯಾ ಸಾರ್ವಜನಿಕ ನೀತಿಯ ಜವಾಬ್ದಾರಿ ನೀಡಿದೆ.ಇದನ್ನು ಓದಿ: 2021-22ರ ಅತೀ ದೊಡ್ಡ ಉದ್ಯೋಗ ಕಡಿತ: 11 ಸಾವಿರ ನೌಕರರ ತೆಗೆದು ಹಾಕಿದ ಫೇಸ್ ಬುಕ್ ಮಾತೃಸಂಸ್ಥೆ ಮೆಟಾ!"ಭಾರತದಲ್ಲಿ ನಮ್ಮ ಮೊದಲ ವಾಟ್ಸಾಪ್ ಮುಖ್ಯಸ್ಥರಾಗಿ ಅಭಿಜಿತ್ ಬೋಸ್ ಅವರ ಅದ್ಭುತ ಕೊಡುಗೆಗಳನ್ನು ನೀಡಿದ್ದು, ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರ ಉದ್ಯಮಶೀಲ ಪ್ರಯತ್ನವು ನಮ್ಮ ತಂಡವು ಲಕ್ಷಾಂತರ ಜನರು ಮತ್ತು ವ್ಯವಹಾರಗಳಿಗೆ ಪ್ರಯೋಜನಕಾರಿಯಾದ ಹೊಸ ಸೇವೆಗಳನ್ನು ನೀಡಲು ಸಹಾಯ ಮಾಡಿದೆ" ಎಂದು ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥ್‌ಕಾರ್ಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಫೆಬ್ರವರಿ 2019 ರಲ್ಲಿ ವಾಟ್ಸಾಪ್ ಇಂಡಿಯಾ ಮೊದಲ ಮುಖ್ಯಸ್ಥರಾಗಿ ಬೋಸ್ ಅಧಿಕಾರ ವಹಿಸಿಕೊಂಡಿದ್ದರು.