: ಚಿನ್ನದ ಬೆಲೆ 208 ರೂ. ಇಳಿಕೆ, ಇಂದಿನ ದರ ಪಟ್ಟಿ ಇಂತಿದೆ! ಮಹಿಳೆಯರ ನೆಚ್ಚಿನ ಚಿನ್ನದರ ಇಂದು ಕೊಂಚ ಇಳಿಕೆಯಾಗಿದ್ದು, ಶನಿವಾರ ಚಿನ್ನದ ಬೆಲೆ 208ರೂಗಳಷ್ಟು ಇಳಿಕೆಯಾಗಿದೆ. ಮುಂಬೈ: ಮಹಿಳೆಯರ ನೆಚ್ಚಿನ ಚಿನ್ನದರ ಇಂದು ಕೊಂಚ ಇಳಿಕೆಯಾಗಿದ್ದು, ಶನಿವಾರ ಚಿನ್ನದ ಬೆಲೆ 208ರೂಗಳಷ್ಟು ಇಳಿಕೆಯಾಗಿದೆ.ಇಂದು ಅಂದರೆ ಶನಿವಾರ 22 ಕ್ಯಾರಟ್‌ ಚಿನ್ನದ ದರದಲ್ಲಿ 190 ರೂ ಇಳಿಕೆಯಾಗಿದ್ದು, 24 ಕ್ಯಾರಟ್‌ ಬಂಗಾರದ ಧಾರಣೆ ಗ್ರಾಂಗೆ 208ರೂ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ದರ 6,570ಕ್ಕೆ ಇಳಿಕೆಯಾಗಿದ್ದು, ಅಂತೆಯೇ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 65,700ಕ್ಕೆ ಇಳಿಕೆಯಾಗಿದೆ.ಅಂತೆಯೇ 24 ಕ್ಯಾರಟ್‌ ನ ಒಂದು ಗ್ರಾಂ ಚಿನ್ನದ ಬೆಲೆ 7,167ರೂ ಇಳಿಕೆಯಾಗಿದ್ದು, 24 ಕ್ಯಾರಟ್‌ ನ 10 ಗ್ರಾಂ ಚಿನ್ನದ ಬೆಲೆ 71,670ರೂ ಗೆ ಇಳಿಕೆಯಾಗಿದೆ.ಬೆಳ್ಳಿ ದರದಲ್ಲಿ ಏರಿಕೆಇನ್ನು ಬೆಳ್ಳಿಯ ಬೆಲೆ ಗ್ರಾಂಗೆ ಅಲ್ಪ ಹೆಚ್ಚಳವಾಗಿದ್ದು, ಪ್ರತೀ ಗ್ರಾಂ ಬೆಳ್ಳಿ ದರದಲ್ಲಿ 10 ಪೈಸೆ ಏರಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ 93.35ರೂಗೆ ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ 933.50ರೂಗೆ ಮತ್ತು 1 ಬೆಳ್ಳಿದರ 93,350ರೂ ಗೆ ಏರಿಕೆಯಾಗಿದೆ.