ಹಿಂದುಜಾ ಗ್ರೂಪ್‌ ಅಧ್ಯಕ್ಷ ಎಸ್ ಪಿ ಹಿಂದುಜಾ ನಿಧನ ನಾಲ್ವರು ಹಿಂದೂಜಾ ಸಹೋದರರಲ್ಲಿ ಹಿರಿಯ ಸಹೋದರ ಹಾಗೂ ಹಿಂದೂಜಾ ಗ್ರೂಪ್‌ ಅಧ್ಯಕ್ಷ ಶ್ರೀಚಂದ್ ಪರಮಾನಂದ ಹಿಂದುಜಾ ಅವರು ಬುಧವಾರ ಲಂಡನ್‌ನಲ್ಲಿ ನಿಧನರಾಗಿದ್ದಾರೆ. ನವದೆಹಲಿ: ನಾಲ್ವರು ಹಿಂದೂಜಾ ಸಹೋದರರಲ್ಲಿ ಹಿರಿಯ ಸಹೋದರ ಹಾಗೂ ಹಿಂದೂಜಾ ಗ್ರೂಪ್‌ ಅಧ್ಯಕ್ಷ ಶ್ರೀಚಂದ್ ಪರಮಾನಂದ ಹಿಂದುಜಾ ಅವರು ಬುಧವಾರ ಲಂಡನ್‌ನಲ್ಲಿ ನಿಧನರಾಗಿದ್ದಾರೆ.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 87 ವರ್ಷದ ಎಸ್ ಪಿ ಹಿಂದುಜಾ ಅವರು ಇಂದು ನಿಧನರಾಗಿದ್ದಾರೆ.ಇದನ್ನು ಓದಿ: ಮಹಾರಾಷ್ಟ್ರ: ಮಹಾತ್ಮ ಗಾಂಧಿ ಮೊಮ್ಮಗ ಅರುಣ್ ಗಾಂಧಿ ವಿಧಿವಶಭಾರತೀಯ ಮೂಲದ ಬ್ರಿಟನ್‌ ಪ್ರಜೆಯಾಗಿದ್ದ, ಹಿಂದೂಜಾ ಗ್ರೂಪ್‌ನ ಅಧ್ಯಕ್ಷರಾದ ಎಸ್‌.ಪಿ. ಹಿಂದುಜಾ ಅವರ ನಿಧನವನ್ನು ಗೋಪಿಚಂದ್, ಪ್ರಕಾಶ್, ಅಶೋಕ್ ಮತ್ತು ಇಡೀ ಹಿಂದೂಜಾ ಕುಟುಂಬವು ವಿಷಾದಿಂದ ತಿಳಿಸುತ್ತಿದೆ ಎಂದು ಕುಟುಂಬದ ವಕ್ತಾರರು ತಿಳಿಸಿದ್ದಾರೆ.