ಮತ್ತೆ ಆರ್ಥಿಕ ಕಷ್ಟದ ದಿನಗಳು: ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಆತಂಕ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಅಮೆರಿಕ ಮತ್ತು ಚೀನಾ ನಡುವಿನ ಸಂಘರ್ಷವು ಉಲ್ಬಣಗೊಗೊಂಡು ಜಾಗತಿಕ ವ್ಯಾಪಾರ ಹಳಿ ತಪ್ಪಿ ಮತ್ತಷ್ಟು ಆರ್ಥಿಕ ಕಷ್ಟದ ದಿನಗಳು ಮತ್ತೆ ಎದುರಾಗಲಿವೆ ಎಂಬ ಆತಂಕವನ್ನು ಎಂದು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ವ್ಯಕ್ತಪಡಿಸಿದ್ದಾರೆ. ಲಂಡನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಅಮೆರಿಕ ಮತ್ತು ಚೀನಾ ನಡುವಿನ ಸಂಘರ್ಷವು ಉಲ್ಬಣಗೊಗೊಂಡು ಜಾಗತಿಕ ವ್ಯಾಪಾರ ಹಳಿ ತಪ್ಪಿ ಮತ್ತಷ್ಟು ಆರ್ಥಿಕ ಕಷ್ಟದ ದಿನಗಳು ಮತ್ತೆ ಎದುರಾಗಲಿವೆ ಎಂಬ ಆತಂಕವನ್ನು ಎಂದು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ವ್ಯಕ್ತಪಡಿಸಿದ್ದಾರೆ.ಗುರುವಾರ ಪ್ಯಾನಿಟ್ ಯುಎಸ್ಎ ವರ್ಚುವಲ್ ಸಮ್ಮೇಳನದಲ್ಲಿ ಮಾತನಾಡಿದ ಅವರು ಈ ಎಚ್ಚರಿಕೆಯನ್ನು ನೀಡಿದ್ದಾರೆ.ನಾವು ಆರ್ಥಿಕತೆಯನ್ನು ಸರಿಪಡಿಸುವುದು, ಸಂಪನ್ಮೂಲಗಳ ಮರುಹಂಚಿಕೆ ಮಾಡುವುದು, ದೊಡ್ಡ, ಸವಾಲಿನ ಕೆಲಸವಾಗಲಿದೆ. ಪರಿಣಾಮ ಅಮೆರಿಕ ಸೇರಿದಂತೆ ಯುರೋಪಿನಲ್ಲಿಯೂ ಅಗಾಧ ದಿವಾಳಿತನಗಳು ನಡೆಯಲಿವೆ ಎಂದು ಅವರು ಅಭಿಪ್ರಾಯಪಟ್ಟರು. ಅಮೆರಿಕ ಚುನಾವಣೆಗೆ ಹತ್ತಿರವಾಗುತ್ತಿದ್ದಂತೆ, ಅಮೆರಿಕ ಮತ್ತು ಚೀನಾ ನಡುವಿನ ಸಂಘರ್ಷವು ಹೆಚ್ಚಾಗಿ ಜಾಗತಿಕ ವಾಣಿಜ್ಯ ವ್ಯಾಪಾರವನ್ನು ಮತ್ತಷ್ಟು ದುರ್ಬಲಗೊಳಿಸಲಿದೆ ಎಂದು ಅವರು ಹೇಳಿದರು.ನವೆಂಬರ್ 3 ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಸ್ಪರ್ಧೆಯು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ನಡುವೆ ನಡೆಯಲಿದೆ.