ಕೊರೋನಾ ಬಿಕ್ಕಟ್ಟು, ಜಾಗತಿಕ ವಾಯು ಸಾರಿಗೆ ಸಹಜ ಸ್ಥಿತಿಗೆ ಮರಳಲು 4 ವರ್ಷ ಬೇಕು: ಐಎಟಿಎ ಜಾಗತಿಕ ವಿಮಾನಯಾನ ಸಂಸ್ಥೆಗಳು ಕೊರೊನಾಸೋಂಕಿನ ಬಿಕ್ಕಟ್ಟಿನ ನಂತರ ಮರಳಿ ಸಹಜ ಸ್ಥಿತಿಗೆ ಮರಳಲು ಕನಿಷ್ಠ ಇನ್ನೂ 4 ವರ್ಷಗಳ ಸಮಯ ತೆಗೆದುಕೊಳ್ಳಲಿದೆ ಎಂದು ಐಎಟಿಎ ಹೇಳಿದೆ. ನವದೆಹಲಿ: ಜಾಗತಿಕ ವಿಮಾನಯಾನ ಸಂಸ್ಥೆಗಳು ಕೊರೊನಾಸೋಂಕಿನ ಬಿಕ್ಕಟ್ಟಿನ ನಂತರ ಮರಳಿ ಸಹಜ ಸ್ಥಿತಿಗೆ ಮರಳಲು ಕನಿಷ್ಠ ಇನ್ನೂ 4 ವರ್ಷಗಳ ಸಮಯ ತೆಗೆದುಕೊಳ್ಳಲಿದೆ ಎಂದು ಐಎಟಿಎ ಹೇಳಿದೆ. ಕೊರೊನಾಸೋಂಕಿನ ಸಾಂಕ್ರಾಮಿಕ ರೋಗವು ವಾಯುಯಾನದ ಮೇಲೆ ಪರಿಣಾಮ ಬೀರುವ ಬಗ್ಗೆ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಎ) ಅಮೆರಿಕ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಾಯುಯಾನದ ದುರ್ಬಲ ದೃಷ್ಟಿಕೋನವನ್ನು ಉಲ್ಲೇಖಿಸಿದೆ.ಈ ವರ್ಷದ ದ್ವಿತೀಯಾರ್ಧವು ನಾವು ನಿರೀಕ್ಷಿಸಿದ್ದಕ್ಕಿಂತ ನಿಧಾನಗತಿಯ ಚೇತರಿಕೆ ಕಾಣಲಿದೆ ಎಂದು ಹೇಳಲಾಗಿದೆ. ಅಮೆರಿಕ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಒಟ್ಟಾಗಿ ಜಾಗತಿಕ ವಾಯುಯಾನದಲ್ಲಿ 40 ಪ್ರತಿಶತವನ್ನು ಪ್ರತಿನಿಧಿಸುವುದರಿಂದ ಚೇತರಿಕೆಯ ನಿರೀಕ್ಷೆಗಳು ದುರ್ಬಲಗೊಂಡಿವೆ ಎಂದೂ ಐಎಟಿಎ ತಿಳಿಸಿದೆ.