ಗ್ರಾಹಕರಿಗೆ ಮತ್ತಷ್ಟು ಶಾಕ್: ಅಡುಗೆ ಅನಿಲ ಸಿಲಿಂಡರ್ ದರ 15 ರೂ. ಏರಿಕೆ; ಇಂದಿನಿಂದ ಹೊಸ ಬೆಲೆ ಜಾರಿ ಪೆಟ್ರೋಲಿಯಂ ಕಂಪೆನಿಗಳು ಇಂಧನ ಬೆಲೆ ಏರಿಕೆ ಮಾಡುತ್ತಿದ್ದಂತೆ ಅಡುಗೆ ಅನಿಲ ಸಿಲಿಂಡರ್ ದರವನ್ನು ಕೂಡ ಬುಧವಾರ 15 ರೂಪಾಯಿ ಏರಿಕೆ ಮಾಡಿವೆ. ನೂತನ ದರ ದೇಶಾದ್ಯಂತ ಇಂದೇ ಜಾರಿಗೆ ಬರಲಿದೆ. ನವದೆಹಲಿ: ಪೆಟ್ರೋಲಿಯಂ ಕಂಪೆನಿಗಳು ಇಂಧನ ಬೆಲೆ ಏರಿಕೆ ಮಾಡುತ್ತಿದ್ದಂತೆ ಅಡುಗೆ ಅನಿಲ ಸಿಲಿಂಡರ್ ದರವನ್ನು ಕೂಡ ಬುಧವಾರ 15 ರೂಪಾಯಿ ಏರಿಕೆ ಮಾಡಿವೆ. ನೂತನ ದರ ದೇಶಾದ್ಯಂತ ಇಂದೇ ಜಾರಿಗೆ ಬರಲಿದೆ.ಈ ಮೂಲಕ ಸಬ್ಸಿಡಿಯೇತರ ಅಡುಗೆ ಅನಿಲ ಸಿಲಿಂಡರ್ ದರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿಗೆ 899 ರೂಪಾಯಿ 50 ಪೈಸೆಯಾಗಿದೆ. 5 ಕೆಜಿ ಸಿಲಿಂಡರ್ ಬೆಲೆ 502 ರೂಪಾಯಿಯಾಗಿದೆ. ಕಳೆದ ಅಕ್ಟೋಬರ್ 1ರಂದು ಪೆಟ್ರೋಲಿಯಂ ಕಂಪೆನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 43 ರೂಪಾಯಿ 5 ಪೈಸೆಯಷ್ಟು ಹೆಚ್ಚಳ ಮಾಡಿದ್ದವು. ಇದೀಗ ಅಡುಗೆ ಅನಿಲ ಸಿಲಿಂಡರ್ ದರವನ್ನು ಕೂಡ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಶಾಕ್ ನೀಡಿದೆ. ಕಳೆದ ಎರಡು ತಿಂಗಳಲ್ಲಿ ಅಡುಗೆ ಅನಿಲ ಏರಿಕೆಯಾಗುತ್ತಿರುವುದು ಇದು ನಾಲ್ಕನೇ ಬಾರಿ. 15. - 14.2 899.50. 5kg 502. . ../nQqtgdOq7q