ಲಾಕ್ ಡೌನ್ ನಡುವೆಯೂ 2020-21 ಅವಧಿಯಲ್ಲಿ ಕೇಂದ್ರಕ್ಕೆ ತೈಲ ತೆರಿಗೆ ಹೆಚ್ಚಳದಿಂದ 1.8 ಲಕ್ಷ ಕೋಟಿ ಆದಾಯ! ಕೇಂದ್ರ ಸರ್ಕಾರಕ್ಕೆ ತೈಲದ ಮೇಲಿನ ತೆರಿಗೆ ಹೆಚ್ಚಳದಿಂದ 2020-21 ನೇ ಸಾಲಿನಲ್ಲಿ ಬರೊಬ್ಬರಿ 1.8 ಲಕ್ಷ ಕೋಟಿ ಹೆಚ್ಚುವರಿ ಆದಾಯ ಬಂದಿದೆ. ಚೆನ್ನೈ: ಕೇಂದ್ರ ಸರ್ಕಾರಕ್ಕೆ ತೈಲದ ಮೇಲಿನ ತೆರಿಗೆ ಹೆಚ್ಚಳದಿಂದ 2020-21 ನೇ ಸಾಲಿನಲ್ಲಿ ಬರೊಬ್ಬರಿ 1.8 ಲಕ್ಷ ಕೋಟಿ ಹೆಚ್ಚುವರಿ ಆದಾಯ ಬಂದಿದೆ. ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ತೈಲ ಬಳಕೆ ಅಂಕಿ-ಅಂಶಗಳ ಡಾಟಾ ಪ್ರಕಾರ, ಕಳೆದ ವರ್ಷ 2.2 ಲಕ್ಷ ಕೋಟಿ ರೂಪಾಯಿಗಳಿದ್ದ ಅಬಕಾರಿ ಸುಂಕ ಸಂಗ್ರಹ ಮೊತ್ತ ಈ ವರ್ಷ 3.9 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದ್ದು 77% ಏರಿಕೆ ಕಂಡಿದೆ. ಈ ಅವಧಿಯಲ್ಲಿ ಕೊರೋನಾ ತಡೆಗೆ ಬಹುತೇಕ ಲಾಕ್ ಡೌನ್ ಪರಿಸ್ಥಿತಿ ಇದ್ದು ತೈಲ ಬಳಕೆ ಶೇ.10.6 ರಷ್ಟು ಕುಸಿತ ಕಂಡರೂ ಸರ್ಕಾರಕ್ಕೆ ತೈಲ ತೆರಿಗೆ ಏರಿಕೆಯಿಂದ ಬಂದಿರುವ ಆದಾಯ ಹೆಚ್ಚಾಗಿದೆ. ಕೇಂದ್ರ ಸರ್ಕಾರ 2020 ರ ಮಾರ್ಚ್ ಹಾಗೂ ಮೇ ತಿಂಗಳಲ್ಲಿ ತೆರಿಗೆ ಹೆಚ್ಚಳ ಮಾಡಿತ್ತು.