ಆಧಾರ್-ಪ್ಯಾನ್ ಜೋಡಣೆ ಮಾಡದಿದ್ದಲ್ಲಿ ಈ ಪ್ರಕ್ರಿಯೆ ಅನುಸರಿಸಿ... ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಮಾಡಲು ಕೊನೆಯ ದಿನವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ 1000 ರೂಪಾಯಿ ದಂಡ ಸಹಿತವಾಗಿ ಜೊಡಣೆ ಮಾಡಲು ಮಾರ್ಚ್ 31 ಕೊನೆಯ ದಿನ ಎಂದು ತಿಳಿಸಲಾಗಿತ್ತು. ಬೆಂಗಳೂರು: ಆಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಮಾಡಲು ಕೊನೆಯ ದಿನವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ 1000 ರೂಪಾಯಿ ದಂಡ ಸಹಿತವಾಗಿ ಜೊಡಣೆ ಮಾಡಲು ಮಾರ್ಚ್ 31 ಕೊನೆಯ ದಿನ ಎಂದು ತಿಳಿಸಲಾಗಿತ್ತು. ನಿರ್ದಿಷ್ಟ ಸೇವೆಗಳನ್ನು ಪಡೆಯುವುದಕ್ಕೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಾಗಿದ್ದು, ಐಟಿಆರ್ ಎಸ್ ಸಲ್ಲಿಸುವುದಕ್ಕೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಲ್ಲ. ಆದರೆ ಐಟಿ ಇಲಾಖೆ ಆಧಾರ್ ಪ್ಯಾನ್ ಕಾರ್ಡ್ ಜೋಡಣೆಯಾಗದೇ ಇದ್ದಲ್ಲಿ ರಿಟರ್ನ್ಸ್ ಪ್ರಕ್ರಿಯೆಯನ್ನು ಮುಂದುವರೆಸುವುದಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ. ಹಲವರು ಈಗಾಗಲೇ ಜೋಡಣೆ ಮಾಡುತ್ತಿದ್ದು ಇನ್ನೂ ಕೆಲವರು ಜೋಡಣೆಯಾಗಿದೆಯೇ ಇಲ್ಲವೇ ಎಂಬುದನ್ನು ಮರೆತಿದ್ದಾರೆ. ಆಧಾರ್-ಪ್ಯಾನ್ ಜೋಡಣೆಯಾಗಿದೆಯೇ ಇಲ್ಲವೇ? ಎಂಬುದನ್ನು ತಿಳಿಯುವುದಕ್ಕೆ ಆನ್ ಲೈನ್ ಹಾಗೂ ಆಫ್ ಲೈನ್ ಗಳಲ್ಲಿ ಅವಕಾಶವಿದೆ.ಆನ್ ಲೈನ್ ನಲ್ಲಿ ಪರಿಶೀಲಿಸುವುದು ಹೇಗೆ? ಒಂದು ವೇಳೆ ಜೋಡಣೆಯಾಗದೇ ಇದ್ದಲ್ಲಿ ಏನು ಮಾಡಬೇಕು? ಪರಿಶೀಲನೆ ವೇಳೆ ಜೋಡಣೆಯಾಗದೇ ಇರುವುದು ಕಂಡುಬಂದಲ್ಲಿ ಈ ಕ್ರಮಗಳನ್ನು ಅನುಸರಿಸಬಹುದಾಗಿದೆ. ಗ್ರಾಹಕರು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ ಸಟ್ ಮೂಲಕ ಆಧಾರ್-ಪ್ಯಾನ್ ಜೋಡಣೆ ಮಾಡಬಹುದಾಗಿದೆ. ಇದಕ್ಕೂ ಮುನ್ನ ದಂಡ ಪಾವತಿಸಬೇಕಿರುವುದರಿಂದ ಗ್ರಾಹಕರು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ () ಪೋರ್ಟಲ್ ಗೆ ಭೇಟಿ ನೀಡಿಬೇಕಾಗುತ್ತದೆ. ಮತ್ತು ಚಲನ್ ಸಂಖ್ಯೆ. 280 ರ ಅಡಿಯಲ್ಲಿ ಮೇಜರ್ ಹೆಡ್ 0021 (ಕಂಪನಿಗಳನ್ನು ಹೊರತುಪಡಿಸಿ ಆದಾಯ ತೆರಿಗೆ) ಮತ್ತು ಮೈನರ್ ಹೆಡ್ 500 (ಇತರ ರಸೀದಿಗಳು) ನೊಂದಿಗೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಪ್ರಕ್ರಿಯೆಗಳ ವಿವರದಂಡ ಪಾವತಿ ಮಾಡಿದ ಬಳಿಕ 4-5 ದಿನಗಳಲ್ಲಿ ಪ್ಯಾನ್- ಆಧಾರ್ ಜೋಡಣೆಗೆ ಮನವಿ ಸಲ್ಲಿಸಿದಂಡ ಪಾವತಿಸಿದ 4-5 ದಿನಗಳ ಬಳಿಕ ಜೋಡಣೆಗೆ ಮಾಡಬೇಕಾದ ಪ್ರಕ್ರಿಯೆ ಹೀಗಿದೆಇದನ್ನೂ ಓದಿ: - : ಆಧಾರ್-ಪ್ಯಾನ್ ಕಡ್ಡಾಯ ಜೋಡಣೆಯಿಂದ ಯಾರಿಗೆ ವಿನಾಯಿತಿ? ಇಲ್ಲಿದೆ ಮಾಹಿತಿ...ತೆರಿಗೆ ಪಾವತಿದಾರರು ಪ್ಯಾನ್ ಕಾರ್ಡ್ ಕೇಂದ್ರಕ್ಕೆ ಭೇಟಿ ನೀಡಿ ನಿರ್ದಿಷ್ಟ ಫಾರ್ಮ್ ತುಂಬಿ, ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನ ಫೋಟೋಕಾಪಿಗಳನ್ನು ಸಲ್ಲಿಕೆ ಮಾಡುವ ಮೂಲಕವೂ ಆಧಾರ್-ಪ್ಯಾನ್ ಜೋಡಣೆ ಮಾಡಬಹುದಾಗಿದೆ. ಆಧಾರ್-ಪ್ಯಾನ್ ಜೋಡಣೆಗೆ ಮಾರ್ಚ್ ವರೆಗೂ ಗಡುವು; ನಿಷ್ಕ್ರಿಯ ಪ್ಯಾನ್ ನಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಮಾಹಿತಿ ಇಲ್ಲಿದೆ...