ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-06-2024)
ನಿತ್ಯ ನೀತಿ: ದುಡಿದು ತಿನ್ನುವ ವಯಸ್ಸಿನಲ್ಲಿ ಕುಳಿತು ತಿಂದರೆ ಕುಳಿತು ತಿನ್ನುವ ವಯಸ್ಸಿನಲ್ಲಿ ದುಡಿದು ತಿನ್ನಬೇಕಾಗುತ್ತದೆ.
ಪಂಚಾಂಗ : ಶನಿವಾರ, 22-06-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ಹುಣ್ಣಿಮೆ / ನಕ್ಷತ್ರ: ಮೂಲಾ / ಯೋಗ: ಶುಕ್ಲ / ಕರಣ: ಬಾಲವ
ಸೂರ್ಯೋದಯ – ಬೆ.05.55ಸೂರ್ಯಾಸ್ತ – 06.49ರಾಹುಕಾಲ – 9.00-10.30ಯಮಗಂಡ ಕಾಲ – 1.30-3.00ಗುಳಿಕ ಕಾಲ – 6.00-7.30
ರಾಶಿಭವಿಷ್ಯ :ಮೇಷ: ಹಣದ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.ವೃಷಭ: ನೀವು ಹಿಂದೆ ಮಾಡಿದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಶತ್ರುಗಳ ಕಾಟ ತಪ್ಪಲಿದೆ.ಮಿಥುನ: ಕೂಡಿಟ್ಟ ಹಣದ ನಷ್ಟವಾಗುವುದು.
ಕಟಕ: ಶಾಂತ ಮನಸ್ಸಿನಿಂದ ಕೆಲಸದ ಕಡೆ ಗಮನ ಕೇಂದ್ರೀಕರಿಸಲು ಯತ್ನಿಸಿಸಿಂಹ: ಸರ್ಕಾರಿ ಕೆಲಸ ಮಾಡುವವರು ಕೆಲವು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗಬಹುದು.ಕನ್ಯಾ:ಕುಟುಂಬದಲ್ಲಿ ಪರಿಸ್ಥಿತಿಗಳು ಏರಿಳಿತಗಳಿಂದ ಕೂಡಿರುತ್ತವೆ. ವೈವಾಹಿಕ ಜೀವನದ ಬಗ್ಗೆ ಗಮನ ಹರಿಸಿ.
ತುಲಾ: ಸರ್ಕಾರಿ ಉದ್ಯೋಗಿಗಳಿಗೆ ನೆಮ್ಮದಿ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ.ವೃಶ್ಚಿಕ: ಬಹುದಿನಗಳ ಆಸೆ ಈಡೇರಲಿದೆ. ಕುಟುಂಬ ಸಮೇತ ತೀರ್ಥಯಾತ್ರೆ ಮಾಡುವಿರಿ.ಧನುಸ್ಸು: ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿನೂತನ ರೀತಿಯಲ್ಲಿ ಪ್ರಯತ್ನ ಮಾಡುವಿರಿ.
ಮಕರ: ಖರ್ಚುಗಳು ಸ್ವಲ್ಪ ಹೆಚ್ಚಾಗಬಹುದು, ಆದರೆ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ.ಕುಂಭ: ಸಣ್ಣ ವ್ಯಾಪಾರಸ್ಥರಿಗೆ ಅನುಕೂಲಕರ ದಿನ. ಲಾಭ ಗಳಿಸಲು ಹಲವು ಅವಕಾಶಗಳು ಒದಗಲಿವೆ.ಮೀನ: ಮನೆಯಲ್ಲಿ ಮಂಗಳಕಾರ್ಯಗಳು ನಡೆಯುವ ಸೂಚನೆಗಳು ಕಾಣುತ್ತವೆ.