ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-06-2024)
ನಿತ್ಯ ನೀತಿ :ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶವನ್ನು ಕಂಡುಕೊಳ್ಳಬಹುದು.
ಪಂಚಾಂಗ : ಸೋಮವಾರ , 24-06-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ /ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಉತ್ತರಾಷಾಢ / ಯೋಗ: ಐಂದ್ರ /ಕರಣ: ವಣಿಜ್‌
ಸೂರ್ಯೋದಯ – ಬೆ.05.56ಸೂರ್ಯಾಸ್ತ – 06.49ರಾಹುಕಾಲ – 7.30-9.00ಯಮಗಂಡ ಕಾಲ – 10.30-12.00ಗುಳಿಕ ಕಾಲ – 1.30-3.00
ರಾಶಿಭವಿಷ್ಯ:ಮೇಷ: ಆದಾಯ ಹೆಚ್ಚಾಗಿರುವುದರಿಂದ ಯಾವುದೇ ತೊಂದರೆ ಇರುವುದಿಲ್ಲ.ವೃಷಭ: ಹಲವು ವಿಷಯಗಳ ಬಗ್ಗೆ ಜನರು ನಿಮ್ಮಿಂದ ಸಲಹೆ-ಸೂಚನೆಗಳನ್ನು ಪಡೆಯುವರು.ಮಿಥುನ: ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಹೆಚ್ಚು ವ್ಯಾಯಾಮ ಮಾಡಬೇಕು.
ಕಟಕ: ಅಂದುಕೊಂಡ ಕೆಲಸ-ಕಾರ್ಯಗಳಲ್ಲಿ ಒಂದಷ್ಟು ಶ್ರಮವಿದ್ದರೂ ತಕ್ಕ ಪ್ರತಿಫಲ ಸಿಗಲಿದೆ.ಸಿಂಹ: ಹಣಕಾಸು ವಿಚಾರ ದಲ್ಲಿ ದೃಢ ನಿರ್ಧಾರ ಕೈಗೊಳ್ಳುವುದು ಒಳಿತು.ಕನ್ಯಾ: ಹಿರಿಯರ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವುದು ಸೂಕ್ತ.
ತುಲಾ: ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುವಲ್ಲಿ ಹೆಚ್ಚು ಸಮಯ ಕಳೆಯುವಿರಿ.ವೃಶ್ಚಿಕ: ಷೇರು ವ್ಯವಹಾರ ದಲ್ಲಿ ತೊಡಗಿಕೊಂಡವರಿಗೆ ಲಾಭ ಸಿಗಲಿದೆ.ಧನುಸ್ಸು: ನೌಕರರಿಗೆ ಉದ್ಯೋಗದಲ್ಲಿನ ಹೊಸ ವ್ಯವಸ್ಥೆಯಿಂದಾಗಿ ಮನಸ್ಸಿಗೆ ಸಂತಸ ಸಿಗಲಿದೆ.
ಮಕರ: ಸೇವೆಯ ಆಧಾರದ ಮೇಲೆ ಕೆಲಸದಲ್ಲಿ ಬಡ್ತಿ ದೊರೆಯಲಿದೆ. ಹೆಚ್ಚು ಲಾಭ ಗಳಿಸುವಿರಿ.ಕುಂಭ: ಒಡಹುಟ್ಟಿದವರಿಂದ ದೂರವಾಗಿದ್ದರೆ ಮಾತನಾಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿ.ಮೀನ: ಸುಲಭವಾಗಿ ಜೀರ್ಣವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಿ.