ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-06-2024)
ನಿತ್ಯ ನೀತಿ :ರಾಮ ಎನ್ನುವವನೇ ರಾವಣನಿಗೆ ಇಷ್ಟವಾಗುವುದಿಲ್ಲ. ಕೃಷ್ಣ ಎನ್ನುವವನೇ ಕಂಸನಿಗೆ ಮೆಚ್ಚುಗೆಯಾಗುವುದಿಲ್ಲ ಎಂದಾದ ಮೇಲೆ ಎಲ್ಲರ ಮೆಚ್ಚುಗೆಗಾಗಿ ಬದುಕುತ್ತೇನೆ ಅಂದರೆ ಅರ್ಥವಿಲ್ಲ.
ಪಂಚಾಂಗ : ಮಂಗಳವಾರ , 25-06-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಶ್ರವಣ / ಯೋಗ: ವೈಧೃತಿ / ಕರಣ: ಭವ
ಸೂರ್ಯೋದಯ – ಬೆ.05.56ಸೂರ್ಯಾಸ್ತ – 06.49ರಾಹುಕಾಲ – 3.00-4.30ಯಮಗಂಡ ಕಾಲ – 9.00-10.30ಗುಳಿಕ ಕಾಲ – 12.00-1.30
ರಾಶಿಭವಿಷ್ಯ :ಮೇಷ: ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಅವಕಾಶಗಳಿವೆ.ವೃಷಭ: ಮಕ್ಕಳಿಂದ ಸಂತಸ ಸಿಗಲಿದೆ.ಮಿಥುನ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದು ಕೊಳ್ಳಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.
ಕಟಕ: ಅಮೂಲ್ಯ ವಸ್ತುವಿನ ಕಳ್ಳತನವಾಗಲಿದೆ.ಸಿಂಹ: ಇತರರ ಮಾತು ಕೇಳಿ ನಿರ್ಧಾರ ಕೈಗೊಳ್ಳದಿರುವುದು ಬಹಳ ಒಳಿತು.ಕನ್ಯಾ:ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದು ಕೊಳ್ಳುವ ಸಾಮರ್ಥ್ಯವನ್ನು ಹೊಂದುತ್ತೀರಿ.
ತುಲಾ: ಬುದ್ಧಿಹೀನರಾಗಿ ವರ್ತಿಸುವಿರಿ. ಉಪನ್ಯಾಸಕ ವೃತ್ತಿಯವರಿಗೆ ನಷ್ಟ.ವೃಶ್ಚಿಕ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುತ್ತದೆ.ಧನುಸ್ಸು: ಹೊಸ ಜನರ ಸಂಪರ್ಕ ಮಾಡಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿ.
ಮಕರ: ಪತ್ನಿ ಸಹಕಾರದಿಂದ ಕೆಲಸ-ಕಾರ್ಯಗಳು ಸುಗಮವಾಗಿ ನೆರವೇರಲಿವೆ.ಕುಂಭ: ಜವಾಬ್ದಾರಿ ಸ್ವೀಕರಿಸುವ ಮೊದಲು ಅದನ್ನು ನಿಭಾಯಿಸುವ ಬಗ್ಗೆ ಯೋಚಿಸಿ.ಮೀನ: ಅಜೀರ್ಣ ಮತ್ತು ಉದರಕ್ಕೆ ಸಂಬಂಧಿಸಿದ ಅನಾರೋಗ್ಯ ಎದುರಾಗಲಿದೆ.