ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(29-06-2024)
ನಿತ್ಯ ನೀತಿ :ಒಬ್ಬ ಒಳ್ಳೆಯ ವ್ಯಕ್ತಿಗೆ ಮೋಸ ಮಾಡುವುದು ಎಂದರೆ ಕೈಯಲ್ಲಿರುವ ವಜ್ರವನ್ನು ಎಸೆದು ಕಲ್ಲನ್ನು ಎತ್ತಿಕೊಂಡಂತೆ.
ಪಂಚಾಂಗ : ಶನಿವಾರ , 29-06-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಉತ್ತರಾಭಾದ್ರ /
ಯೋಗ: ಶೋಭನ / ಕರಣ: ತೈತಿಲಸೂರ್ಯೋದಯ – ಬೆ.05.57ಸೂರ್ಯಾಸ್ತ – 06.50ರಾಹುಕಾಲ – 9.00-10.30ಯಮಗಂಡ ಕಾಲ – 1.30-3.00ಗುಳಿಕ ಕಾಲ – 6.00-7.30
ರಾಶಿಭವಿಷ್ಯ :ಮೇಷ: ಪತ್ರಿಕೆ ಮತ್ತು ಕೆಲವು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಕೆಲಸದ ಅಸ್ಥಿರತೆ ಕಾಡಲಿದೆ.ವೃಷಭ: ನಿಮ್ಮ ಸುತ್ತಲೂ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರಿ.ಮಿಥುನ: ಆಸ್ತಿ ಖರೀದಿಸಲು ಅಥವಾ ಹೂಡಿಕೆ ಮಾಡಲು ಬಯಸುವವರು ವಂಚನೆಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಅತ್ಯಂತ ಎಚ್ಚರಿಕೆಯಿಂದಿರಿ.
ಕಟಕ: ದೂರ ಪ್ರಯಾಣ. ಖರ್ಚು ಹೆಚ್ಚಾಗುವ ಸಂಭವಸಿಂಹ: ಆರ್ಥಿಕವಾಗಿ ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ.ಕನ್ಯಾ: ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ.
ತುಲಾ: ಕುಲದೇವರ ಪ್ರಾರ್ಥನೆಯಿಂದ ಅನುಕೂಲವಾಗಲಿದೆ.ವೃಶ್ಚಿಕ: ಉಸಿರಾಟದ ತೊಂದರೆ ಇರುವವರು ಎಚ್ಚರಿಕೆಯಿಂದಿದ್ದು, ಸೂಕ್ತ ಚಿಕಿತ್ಸೆ ಪಡೆಯುವುದು ಬಹಳ ಒಳ್ಳೆಯದು.ಧನುಸ್ಸು: ವಿಧೇಯತೆಯಿಂದ ಇರುವ ನಿಮ್ಮ ಗುಣ ಉನ್ನತ ಅಧಿ ಕಾರಿಗಳಿಗೆ ಇಷ್ಟವಾಗಲಿದೆ.
ಮಕರ: ಉದ್ಯೋಗ ಬದಲಾವಣೆ ದೊಡ್ಡ ಸಮಸ್ಯೆಯಾಗಲಿದೆ. ದೂರ ಪ್ರಯಾಣ ಬೇಡ.ಕುಂಭ: ಚಾಣಾಕ್ಷತನದಿಂದ ಕೆಲಸ-ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ.ಮೀನ: ಆರ್ಥಿಕ ಸಮಸ್ಯೆ ಎದುರಿಸಲು ಸಿದ್ಧರಾಗಿ. ಕೃಷಿ ಕಾರ್ಯಗಳು ಬಿಡುವಿಲ್ಲದೆ ನಡೆಯಲಿವೆ.