ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-06-2024)
ನಿತ್ಯ ನೀತಿ :ಪೂರ್ತಿ ವಿಷಯ ತಿಳಿಯದೆ ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಬೇಡಿ. ಏಕೆಂದರೆ ಅವರ ಪರಿಸ್ಥಿತಿ ಮತ್ತು ಸಂದರ್ಭ ಅವರಿಗೆ ಮಾತ್ರ ತಿಳಿದಿರುತ್ತದೆ.
ಪಂಚಾಂಗ : ಬುಧವಾರ, 19-06-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ /ತಿಥಿ: ದ್ವಾದಶಿ / ನಕ್ಷತ್ರ: ವಿಶಾಖಾ / ಯೋಗ: ಸಿದ್ಧ / ಕರಣ: ಕೌಲವಸೂರ್ಯೋದಯ – ಬೆ.05.54ಸೂರ್ಯಾಸ್ತ – 06.48ರಾಹುಕಾಲ – 12.00-1.30ಯಮಗಂಡ ಕಾಲ – 7.30-9.00ಗುಳಿಕ ಕಾಲ – 10.30-12.00
ರಾಶಿಭವಿಷ್ಯ :ಮೇಷ: ಚಂಚಲ ಮನಸ್ಸಿನಿಂದ ತೊಂದರೆಯಾಗ ದಂತೆ ಎಚ್ಚರ ವಹಿಸುವುದು ಒಳಿತು.ವೃಷಭ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದೆ. ಕೃಷಿಯಲ್ಲಿ ಪ್ರಗತಿ ಸಾಧಿಸುವಿರಿ.ಮಿಥುನ: ಆಸ್ತಿ ವಿಚಾರದಲ್ಲಿ ಕಲಹ. ಸಹೋದರತ್ವ ದಲ್ಲಿ ದ್ವೇಷ ಉಂಟಾಗಲಿದೆ.
ಕಟಕ: ಅವಿವಾಹಿತರಿಗೆ ವಿವಾಹ ಯೋಗ. ಆದಾಯ ಕ್ಕಿಂತ ಖರ್ಚು ಹೆಚ್ಚು.ಸಿಂಹ: ರಿಯಲ್‌ ಎಸ್ಟೇಟ್‌ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಇರುತ್ತದೆ.ಕನ್ಯಾ: ಸಂಗಾತಿಗೆ ನಿಮ್ಮೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ.
ತುಲಾ: ಶಾರೀರಿಕ ಸಮಸ್ಯೆ. ಸಣ್ಣ ವ್ಯಾಪಾರಸ್ಥರಿಗೆ ಕೊಂಚ ಲಾಭ. ಅಧಿ ಕಾರಿ ವರ್ಗದವರಿಗೆ ತೊಂದರೆ.ವೃಶ್ಚಿಕ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆಯಾಗಲಿದೆ.ಧನುಸ್ಸು: ಸ್ನೇಹಿತರಿಗೆ ಸಹಕಾರ. ಹಣಕಾಸಿನ ವಿಚಾರ ದಲ್ಲಿ ಶುಭ ಸುದ್ದಿ. ಸ್ವಯಂ ಉದ್ಯೋಗಸ್ಥರಿಗೆ ಶುಭ.
ಮಕರ: ರಿಯಲ್‌ ಎಸ್ಟೇಟ್‌ ವ್ಯಾಪಾರಿಗಳಿಗೆ ಲಾಭದಾಯಕವಾದ ದಿನ.ಕುಂಭ: ದಾಂಪತ್ಯ ಜೀವನದಲ್ಲಿ ಕಲಹ. ಗೊಂದಲದ ವಾತಾವರಣ ನಿರ್ಮಾಣವಾಗಬಹುದು.ಮೀನ: ಪತ್ರಕರ್ತರು, ಸಾಹಿತಿಗಳಿಗೆ ಸನ್ಮಾನ.