ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-07-2024)
ನಿತ್ಯ ನೀತಿ :ಒಬ್ಬರನ್ನು ಸೋಲಿಸುವುದು ಸುಲಭ. ಆದರೆ, ಒಬ್ಬರ ಮನಸ್ಸನ್ನು ಗೆಲ್ಲುವುದು ಕಷ್ಟ.
ಪಂಚಾಂಗ : ಭಾನುವಾರ , 07-07-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ /ತಿಥಿ: ದ್ವಿತೀಯಾ / ನಕ್ಷತ್ರ: ಪುಷ್ಯ (ಪೂರ್ಣ) / ಯೋಗ: ಹರ್ಷಣ / ಕರಣ: ಬಾಲವ
ಸೂರ್ಯೋದಯ – ಬೆ.05.59ಸೂರ್ಯಾಸ್ತ – 06.50ರಾಹುಕಾಲ – 4.30-6.00ಯಮಗಂಡ ಕಾಲ – 12.00-1.30ಗುಳಿಕ ಕಾಲ – 3.00-4.30
ರಾಶಿಭವಿಷ್ಯ :ಮೇಷ: ಉದ್ಯೋಗ ಬದಲಾಯಿಸಲು ಯೋಚಿಸುವಿರಿ. ಅಮೂಲ್ಯ ವಸ್ತುಗಳ ಖರೀದಿಗೆ ಉತ್ತಮ ದಿನ.ವೃಷಭ: ನಿರೀಕ್ಷೆಗಿಂತ ಹೆಚ್ಚು ಖರ್ಚು ಮಾಡಬೇಕಾದ ಸಂದರ್ಭಗಳು ಎದುರಾಗಬಹುದು.ಮಿಥುನ: ಮನೆಯ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ನಿಭಾಯಿಸಬೇಕು.
ಕಟಕ: ಮಧ್ಯವರ್ತಿಗಳ ಸಹಾಯದಿಂದ ವಿವಾಹದ ವಿಷಯದಲ್ಲಿ ಅನುಕೂಲವಾಗಲಿದೆ.ಸಿಂಹ: ಸುತ್ತಮುತ್ತಲಿನ ಜನರೊಂದಿಗೆ ಜಗಳ ವಾಡದಿರುವುದು ಸೂಕ್ತ.ಕನ್ಯಾ: ಮಾನಸಿಕ ಒತ್ತಡ ತೊಡೆದುಹಾಕಲು ಪ್ರಯತ್ನಿಸಿ.
ತುಲಾ: ಕುಟುಂಬ ಸದಸ್ಯ ರೊಂದಿಗೆ ಜಗಳವಾಡುವ ಸಾಧ್ಯತೆಯಿದೆ.ವೃಶ್ಚಿಕ: ಆಸ್ತಿ, ಅಪಾರ್ಟ್ ಮೆಂಟ್ ಖರೀದಿಯಲ್ಲಿ ಅಧಿ ಕ ಹಣ ಹೂಡಿಕೆ ಮಾಡುವಿರಿ. ದೂರ ಪ್ರಯಾಣ ಮಾಡುವಿರಿ.ಧನುಸ್ಸು: ಬೆನ್ನು ನೋವು ಮತ್ತು ಸ್ನಾಯು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ಕಾರಣ ಕೆಲವು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.
ಮಕರ: ಅಧಿ ಕೃತ ಪ್ರಯಾಣ ಕೈಗೊಳ್ಳುವಿರಿ ಮತ್ತು ಅದರಿಂದ ಪ್ರಯೋಜನ ಸಿಗಲಿದೆ.ಕುಂಭ: ಕೌಟುಂಬಿಕ ಅಗತ್ಯತೆ ಮತ್ತು ಜವಾಬ್ದಾರಿ ಪೂರೈಸಲು ಹಣ ಖರ್ಚು ಮಾಡಬೇಕಾಗುತ್ತದೆ.ಮೀನ: ಶಿಕ್ಷಕರೊಂದಿಗೆ ಉತ್ತಮ ಸಂಬಂಧ ಕಾಪಾಡಿ ಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.