ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-07-2024)
ನಿತ್ಯ ನೀತಿ :ಕೆಲವರು ನಮಲ್ಲಿರುವ ಸದ್ಗುಣಗಳನ್ನು ತಳ್ಳಿಹಾಕಿ ಲೋಪದೋಷಗಳನ್ನು ಮಾತ್ರ ಹುಡುಕುತ್ತಾರೆ.
ಪಂಚಾಂಗ : ಮಂಗಳವಾರ, 02-07-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಕೃತ್ತಿಕಾ / ಯೋಗ: ಧೃತಿ / ಕರಣ: ಕೌಲವ
ಸೂರ್ಯೋದಯ – ಬೆ.05.58ಸೂರ್ಯಾಸ್ತ – 06.50ರಾಹುಕಾಲ – 3.00-4.30ಯಮಗಂಡ ಕಾಲ – 9.00-10.30ಗುಳಿಕ ಕಾಲ – 12.00-1.30
ರಾಶಿಭವಿಷ್ಯ :ಮೇಷ: ಹಣ ಉಳಿತಾಯ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸುವುದು ಒಳಿತು.ವೃಷಭ: ಯುವಕರು ಶಾಶ್ವತ ಕೆಲಸ ಹುಡುಕುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ.ಮಿಥುನ: ಅಂದುಕೊಂಡಿದ್ದ ಕೆಲಸಗಳು ಉತ್ತಮ ವಾಗಿ ನೆರವೇರುವುದರಿಂದ ನೆಮ್ಮದಿ ಸಿಗಲಿದೆ.
ಕಟಕ: ಲೇವಾದೇವಿ ವ್ಯವ ಹಾರ ನಡೆಸುವುದು ಸರಿಯಲ್ಲ. ಮಾತನಾಡುವಾಗ ಎಚ್ಚರಿಕೆ ಇರಲಿ.ಸಿಂಹ: ನಿರೀಕ್ಷಿಸಿದಂತೆ ಅಧಿ ಕ ಧನಲಾಭ ದೊರೆಯ ಲಿದೆ. ಅನ್ಯರ ಮಾತಿನ ಬಗ್ಗೆ ವಿಶ್ವಾಸ ಬೇಡ.ಕನ್ಯಾ:ವ್ಯವಹಾರದಲ್ಲಿನ ಯೋಜನೆ ಹಾಗೂ ಅವುಗಳ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಿ.
ತುಲಾ: ಕಷ್ಟದ ಪರಿಸ್ಥಿತಿ ಯಲ್ಲಿ ಜನಬಲದ ಕೊರತೆ ಯಾದರೂ ಸ್ನೇಹಿತರ ಸಹಕಾರ ಸಿಗಲಿದೆ.ವೃಶ್ಚಿಕ: ಖರ್ಚು-ವೆಚ್ಚ ಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಗತ್ಯ.ಧನುಸ್ಸು: ಹಣದ ವಿಚಾರದಲ್ಲಿ ಮನೆಯ ಹಿರಿಯರೊಂದಿಗೆ ವಾಗ್ವಾದ ನಡೆಯಬಹುದು.
ಮಕರ: ಹಿರಿಯರ ಆಶೀರ್ವಾದ ಸದಾಕಾಲ ನಿಮ್ಮೊಂದಿಗಿರುತ್ತದೆ. ಅನ್ಯರಿಗೆ ಉಪಕಾರ ಮಾಡುವಿರಿ.ಕುಂಭ: ವ್ಯವಹಾರದಲ್ಲಿ ಮೋಸವಾಗಬಹುದು. ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ.ಮೀನ: ಹಣಕಾಸಿನ ಸಂಸ್ಥೆಯವರಿಗೆ ಆಧಿ ಕ ಒತ್ತಡ. ಉದ್ಯೋಗದಲ್ಲಿ ಲಾಭ ಸಿಗಲಿದೆ.