ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-07-2024)
ನಿತ್ಯ ನೀತಿ :ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕೊಟ್ಟ ಮಾತು, ಇಟ್ಟ ನಂಬಿಕೆ ಸುಳ್ಳಾದರೆ ಆತನ ಬೆಲೆ ಶೂನ್ಯವೇ…
ಪಂಚಾಂಗ : ಮಂಗಳವಾರ , 16-07-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ /ತಿಥಿ: ದಶಮಿ / ನಕ್ಷತ್ರ: ವಿಶಾಖಾ / ಯೋಗ: ಸಾಧ್ಯ / ಕರಣ: ತೈತಿಲ
ಸೂರ್ಯೋದಯ – ಬೆ.06.01ಸೂರ್ಯಾಸ್ತ – 06.50ರಾಹುಕಾಲ – 3.00-4.30ಯಮಗಂಡ ಕಾಲ – 12.00-1.30ಗುಳಿಕ ಕಾಲ – 9.00-10.30
ರಾಶಿಭವಿಷ್ಯ :ಮೇಷ: ಮಕ್ಕಳಿಂದ ಅನುಕೂಲ. ಉತ್ತಮ್ಮ ಹೆಸರು ಮಾಡುವ ಆಲೋಚನೆ ಮಾಡುವಿರಿ.ವೃಷಭ: ಉದ್ಯೋಗದ ಕಡೆಗೆ ಹೆಚ್ಚಿನ ಗಮನಹರಿಸಿ. ಖರ್ಚು ಹೆಚ್ಚಾಗಲಿದೆ.ಮಿಥುನ: ಹಣ ಹೇಗೆ ವಿನಿಯೋಗ ಆಗಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಬಹಳ ಮುಖ್ಯ.
ಕಟಕ: ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸುವಿರಿ.ಸಿಂಹ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳಾಗಲಿವೆ.ಕನ್ಯಾ:ಸಹೋದರರು ಆರ್ಥಿಕ ಸಹಾಯ ಮಾಡುವರು. ಇದರಿಂದ ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಲಿದೆ.
ತುಲಾ: ಹಣಕಾಸು ವಿಚಾರ ದಲ್ಲಿ ದೃಢ ನಿರ್ಧಾರ ಕೈಗೊಳ್ಳುವುದು ಒಳಿತು.ವೃಶ್ಚಿಕ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರಿ.ಧನುಸ್ಸು: ಉದ್ಯೋಗಸ್ಥ ಮಹಿಳೆಯರಿಗೆ ಶುಭ ದಿನ. ಕೃಷಿಕರಿಗೆ ಶುಭಫಲ ಸಿಗಲಿದೆ. ಉದ್ಯೋಗದಲ್ಲಿ ಲಾಭ.
ಮಕರ: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.ಕುಂಭ: ಕೆಲಸ ಸ್ಥಳದಲ್ಲಿ ಕಿರಿಕಿರಿ ಉಂಟಾಗಿ ಕೆಲಸ ಬಿಡುವ ಮನಸ್ಸು ಕೂಡ ಮಾಡಬಹುದು.ಮೀನ: ಧಾರ್ಮಿಕ ಕಾರ್ಯಗಳತ್ತ ಗಮನ ಹರಿಸುವಿರಿ. ಕೀರ್ತಿ ನಿಮ್ಮನ್ನು ಅರಸಿ ಬರಲಿದೆ.