ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-07-2024)
ನಿತ್ಯ ನೀತಿ :ಹಣ ಗಳಿಸುವುದರಲ್ಲಿ ಜೀವನ ಕಳೆಯಬೇಡಿ. ಖರ್ಚು ಮಾಡಲೂ ಸಮಯವಿಲ್ಲದಂತಾದರೆ ಪ್ರಯೋಜನವಿರುವುದಿಲ್ಲ.
ಪಂಚಾಂಗ : ಬುಧವಾರ , 17-07-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಅನುರಾಧಾ / ಯೋಗ: ಶುಭ / ಕರಣ: ವಣಿಜ್
ಸೂರ್ಯೋದಯ – ಬೆ.06.02ಸೂರ್ಯಾಸ್ತ – 06.50ರಾಹುಕಾಲ – 12.00-1.30ಯಮಗಂಡ ಕಾಲ – 7.30-9.00ಗುಳಿಕ ಕಾಲ – 10.30-12.00
ರಾಶಿಭವಿಷ್ಯ :ಮೇಷ: ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಮಹತ್ವ ಕೊಡುವಿರಿ. ಮಕ್ಕಳಿಂದ ಸಂತಸ ಸಿಗಲಿದೆ.ವೃಷಭ: ವ್ಯಾಪಾರದಲ್ಲಿ ಶತ್ರುಗಳ ಕಾಟ. ನಿವೇಶನ ಖರೀದಿಗೆ ನಿರ್ಧಾರ ಮಾಡುವಿರಿ.ಮಿಥುನ: ಕಚೇರಿ ಕೆಲಸವನ್ನು ನಿಷ್ಠೆಯಿಂದ ಮಾಡು ವಿರಿ. ಅನ್ಯರಿಗೆ ಉಪಕಾರ ಮಾಡಲು ಮುಂದಾಗಿ.
ಕಟಕ: ಪತ್ನಿ ಸಹಕಾರದಿಂದ ಕೆಲಸ-ಕಾರ್ಯಗಳು ಸುಗಮವಾಗಿ ನೆರವೇರಲಿವೆ.ಸಿಂಹ: ಧಾರ್ಮಿಕ ಕಾರ್ಯಗಳತ್ತ ಗಮನ ಹರಿಸುವಿರಿ. ಕೀರ್ತಿ ನಿಮ್ಮನ್ನು ಅರಸಿ ಬರಲಿದೆ.ಕನ್ಯಾ:ಅಂದುಕೊಂಡಿದ್ದ ಕೆಲಸಗಳು ಉತ್ತಮ್ಮವಾಗಿ ನೆರವೇರುವುದರಿಂದ ನೆಮ್ಮದಿ ಸಿಗಲಿದೆ.
ತುಲಾ: ಕಟ್ಟಡ ನಿರ್ಮಾಣಗಾರರಿಗೆ ಹೆಚ್ಚಿನ ಕೆಲಸ ಇರುವುದು.ವೃಶ್ಚಿಕ: ಉಪನ್ಯಾಸಕ ವೃತ್ತಿಯವರಿಗೆ ನಷ್ಟ.ಧನುಸ್ಸು: ಕಷ್ಟದ ಪರಿಸ್ಥಿತಿಯಲ್ಲಿ ಜನಬಲದ ಕೊರತೆಯಾದರೂ ಸ್ನೇಹಿತರ ಸಹಕಾರ ಸಿಗಲಿದೆ.
ಮಕರ: ಹೊಸ ಜನರ ಸಂಪರ್ಕ ಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.ಕುಂಭ: ಅಜೀರ್ಣ ಮತ್ತು ಉದರಕ್ಕೆ ಸಂಬಂಧಿಸಿದ ಅನಾರೋಗ್ಯ ಎದುರಾಗಲಿದೆ.ಮೀನ: ಜವಾಬ್ದಾರಿ ಸ್ವೀಕರಿಸುವ ಮೊದಲು ಅದನ್ನು ನಿಭಾಯಿಸುವ ಬಗ್ಗೆ ಯೋಚಿಸಿ.