ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-06-2024)
ನಿತ್ಯ ನೀತಿ :ಎಲ್ಲರನ್ನೂ ಪ್ರೀತಿಸು. ಕೆಲವರನ್ನಷ್ಟೇ ನಂಬು. ಯಾರಿಗೂ ಕೇಡು ಬಗೆಯಬೇಡ. ಇದುವೇ ಜೀವನದ ನಿಜ ಸೂತ್ರ.
ಪಂಚಾಂಗ : ಶನಿವಾರ, 20-07-2024ಕ್ರೋನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಪೂರ್ವಾಷಾಢ / ಯೋಗ: ವೈಧೃತಿ / ಕರಣ: ಗರಜೆಸೂರ್ಯೋದಯ – ಬೆ.06.03ಸೂರ್ಯಾಸ್ತ – 06.50ರಾಹುಕಾಲ – 9.00-10.30ಯಮಗಂಡ ಕಾಲ – 1.30-3.00ಗುಳಿಕ ಕಾಲ – 6.00-7.30
ರಾಶಿಭವಿಷ್ಯ :ಮೇಷ: ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.ವೃಷಭ: ವಿದೇಶ ಪ್ರಯಾಣಕ್ಕೆ ಅನುಕೂಲ ಒದಗಿ ಬರಲಿದೆ. ಪಿತ್ರಾರ್ಜಿತ ಆಸ್ತಿ ಬರಬೇಕಿದ್ದಲ್ಲಿ ತಡವಾಗಲಿದೆ.ಮಿಥುನ: ಹಳೆ ಮಿತ್ರರ ಆಗಮನವಾಗಲಿದೆ. ಉದ್ಯಮಗಳ ಬೆಳವಳಿಗೆಗೆ ಸಿದ್ಧತೆ ನಡೆಯಲಿದೆ.
ಕಟಕ: ಕಾಲೇಜು ಉಪನ್ಯಾಸಕರಿಗೆ ಅಧಿಕ ಒತ್ತಡ. ಸ್ವಯಂಕೃತ ಅಪರಾಧದಿಂದ ನಷ್ಟ ಸಂಭವಿಸಲಿದೆ.ಸಿಂಹ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.ಕನ್ಯಾ: ಕುತಂತ್ರದಿಂದ ಹಣ ಸಂಪಾದನೆ ಮಾಡುವಿರಿ.
ತುಲಾ: ಅಸಾಧ್ಯವಾದ ಅನಗತ್ಯ ಚಿಂತನೆಯಲ್ಲಿ ನಿಮ್ಮ ಶಕ್ತಿ ವ್ಯರ್ಥ ಮಾಡುವ ಬದಲು ಅದನ್ನು ಸರಿಯಾದ ದಿಕ್ಕಿನಲ್ಲಿ ಬಳಸಿವೃಶ್ಚಿಕ: ದಾಯಾದಿ ಕಲಹ. ಅನಿರೀಕ್ಷಿತ ಪ್ರಯಾಣ.ಧನುಸ್ಸು: ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳಬಹುದು ಎಚ್ಚರಿಕೆಯಿಂದಿರಿ.
ಮಕರ: ವೈದ್ಯಕೀಯ ವೃತ್ತಿಯಲ್ಲಿ ಕೀರ್ತಿ ಗಳಿಸುವಿರಿ.ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ.ಮೀನ: ಕೆಲಸದ ಸ್ಥಳದಲ್ಲಿ ಅನುಕೂಲಕರ ಸನ್ನಿವೇಶಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ.