ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-07-2024)
ನಿತ್ಯ ನೀತಿ:ಯಾವ ವ್ಯಕ್ತಿಗೆ ದುರಾಸೆ ಇಲ್ಲವೋ ಅವನನ್ನು ಗುಲಾಮನನ್ನಾಗಿ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ.
ಪಂಚಾಂಗಭಾನುವಾರ – 21-07-2024ಕ್ರೋನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ಹುಣ್ಣಿಮೆ / ನಕ್ಷತ್ರ: ಉತ್ತರಾಷಾಢ / ಯೋಗ: ವಿಷ್ಕಂಭ / ಕರಣ: ಬಾಲವ
ಸೂರ್ಯೋದಯ : ಬೆ.06.03ಸೂರ್ಯಾಸ್ತ : 06.49ರಾಹುಕಾಲ : 4.30-6.00ಯಮಗಂಡ ಕಾಲ : 12.00-1.30ಗುಳಿಕ ಕಾಲ : 3.00-4.30
ರಾಶಿ ಭವಿಷ್ಯಮೇಷ: ಉನ್ನತ ಶಿಕ್ಷಣದಲ್ಲಿ ಯಶಸ್ಸು ಸಾ„ಸುವಿರಿ. ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡುವಿರಿ.ವೃಷಭ: ಕಚೇರಿ ಕೆಲಸವನ್ನು ನಿಷ್ಠೆಯಿಂದ ಮಾಡು ವಿರಿ. ಅನ್ಯರಿಗೆ ಉಪಕಾರ ಮಾಡಲು ಮುಂದಾಗಿ.ಮಿಥುನ: ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಮಹತ್ವ ಕೊಡುವಿರಿ. ಮಕ್ಕಳಿಂದ ಸಂತಸ ಸಿಗಲಿದೆ.
ಕಟಕ: ಮೋಜು-ಮಸ್ತಿಯಲ್ಲಿ ತೊಡಗುವಿರಿ.ಸಿಂಹ: ಪತ್ನಿ ಸಹಕಾರದಿಂದ ಕೆಲಸ-ಕಾರ್ಯಗಳು ಸುಗಮವಾಗಿ ನೆರವೇರಲಿವೆ.ಕನ್ಯಾ: ಅಂದುಕೊಂಡಿದ್ದ ಕೆಲಸಗಳು ಉತ್ತಮವಾಗಿ ನೆರವೇರುವುದರಿಂದ ನೆಮ್ಮದಿ ಸಿಗಲಿದೆ.
ತುಲಾ: ಹಣದ ಕೊರತೆ ಇರುವುದಿಲ್ಲ. ಕಠಿಣ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.ವೃಶ್ಚಿಕ: ಉಪನ್ಯಾಸಕ ವೃತ್ತಿಯವರಿಗೆ ನಷ್ಟ.ಧನುಸ್ಸು: ಅಜೀರ್ಣ ಮತ್ತು ಉದರಕ್ಕೆ ಸಂಬಂಸಿದ ಅನಾರೋಗ್ಯ ಎದುರಾಗಲಿದೆ.
ಮಕರ: ಕಷ್ಟದ ಪರಿಸ್ಥಿತಿಯಲ್ಲಿ ಜನಬಲದ ಕೊರತೆಯಾದರೂ ಸ್ನೇಹಿತರ ಸಹಕಾರ ಸಿಗಲಿದೆ.ಕುಂಭ: ಹೊಸ ಜನರ ಸಂಪರ್ಕ ಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.ಮೀನ: ಮಹಿಳೆಯರಿಗೆ ಆಭರಣ ಸಿಗಲಿದೆ. ಬಂಧುಗಳ ಸಹಾಯ-ಸಹಕಾರ ದೊರೆಯುವುದು.