ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-07-2024)
ನಿತ್ಯ ನೀತಿ: ಮಳೆ ಬಂದು ನಿಂತ ನಂತರವೇ ಪ್ರಕೃತಿ ಸುಂದರವಾಗಿ ಕಾಣುವುದು. ಹಾಗೆಯೇ ಜೀವನದಲ್ಲಿ ಕಷ್ಟಗಳು ಬಂದು ಹೋದ ನಂತರವೇ ಜೀವನ ಸುಂದರವಾಗಿ ಕಾಣುವುದು.
ಪಂಚಾಂಗ ಮಂಗಳವಾರ 23-07-2024ಕ್ರೋನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಧನಿಷ್ಠಾ / ಯೋಗ: ಆಯುಷ್ಮಾನ್ / ಕರಣ: ವಣಿಜ್
ಸೂರ್ಯೋದಯ : ಬೆ.06.03ಸೂರ್ಯಾಸ್ತ : 06.49ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30
ರಾಶಿ ಭವಿಷ್ಯಮೇಷ: ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸುವಿರಿ. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.ವೃಷಭ: ಬಹುದಿನಗಳ ಕನಸು ನನಸಾಗಲಿದೆ. ಸ್ಥಿರಾಸ್ತಿ ಖರೀದಿ ಯೋಗವಿದೆ.ಮಿಥುನ: ಪ್ರಿಂಟಿಂಗ್ ವ್ಯಾಪಾರಿಗಳಿಗಗೆ ನಿರೀಕ್ಷಿತ ಆದಾಯ ಸಿಗಲಿದೆ.
ಕಟಕ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.ಸಿಂಹ: ಉದ್ಯೋಗದ ಕಡೆಗೆ ಹೆಚ್ಚಿನ ಗಮನಹರಿಸಿ. ಖರ್ಚು ಹೆಚ್ಚಾಗಲಿದೆ.ಕನ್ಯಾ: ಸಹೋದರರು ಆರ್ಥಿಕವಾಗಿ ಸಹಾಯ ಮಾಡುವರು.
ತುಲಾ: ಬೇರೆಯವರು ನಿಮ್ಮೊಂದಿಗೆ ಗೆಳೆತನ ಬೆಳೆಸಲು ಬಯಸುತ್ತಾರೆ.ವೃಶ್ಚಿಕ: ಸಾಲದ ಚಿಂತೆಗೆ ಪರಿಹಾರ ಸಿಗುವುದು.ಧನುಸ್ಸು: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.
ಮಕರ: ಕೆಲಸ ಸ್ಥಳದಲ್ಲಿ ಕಿರಿಕಿರಿ ಉಂಟಾಗಿ ಕೆಲಸ ಬಿಡುವ ಮನಸ್ಸು ಕೂಡ ಮಾಡಬಹುದು.ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ಶುಭ ದಿನ. ಕೃಷಿಕರಿಗೆ ಶುಭಫಲ ಸಿಗಲಿದೆ. ಉದ್ಯೋಗದಲ್ಲಿ ಲಾಭ.ಮೀನ: ಧಾರ್ಮಿಕ ಕಾರ್ಯಗಳತ್ತ ಗಮನ ಹರಿಸುವಿರಿ. ಕೀರ್ತಿ ನಿಮ್ಮನ್ನು ಅರಸಿ ಬರಲಿದೆ.