ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ(28-07-2024)
ನಿತ್ಯ ನೀತಿ :ಹೃದಯದಲ್ಲಿರುವ ಭಾರವನ್ನು ಕಡಿಮೆ ಮಾಡುವ ಶಕ್ತಿ ಒಂದು ನಗುವಿಗೆ ಮಾತ್ರ ಇರುತ್ತದೆ. ಅದಕ್ಕೇ ಯಾವಾಗಲೂ ನಗುನಗುತ್ತಾ ಸಂತೋಷವಾಗಿರಿ.
ಪಂಚಾಂಗ : ಭಾನುವಾರ , 28-07-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷತಿಥಿ: ಅಷ್ಟಮಿ / ನಕ್ಷತ್ರ: ಅಶ್ವಿನಿ / ಯೋಗ: ಶೂಲ / ಕರಣ: ಬಾಲವ
ಸೂರ್ಯೋದಯ : 06.04ಸೂರ್ಯಾಸ್ತ : 06.48ರಾಹುಕಾಲ : 4.30-6.00ಯಮಗಂಡ ಕಾಲ : 12.00-1.30ಗುಳಿಕ ಕಾಲ : 3.00-4.30
ರಾಶಿ ಭವಿಷ್ಯಮೇಷ: ಉದ್ಯೋಗಸ್ಥ ಮಹಿಳೆಯರಿಗೆ ಸಲ್ಲದ ಅಪವಾದ. ಥಳುಕಿನ ಮಾತಿಗೆ ಮರುಳಾಗದಿರಿ.ವೃಷಭ: ಹಣ ಬಂದರೂ ಉಳಿಯದು. ಷೇರು ವ್ಯವಹಾರಗಳಲ್ಲಿ ನಷ್ಟ ಸಂಭವಿಸಬಹುದು.ಮಿಥುನ: ಬ್ಯಾಂಕ್ ಉದ್ಯೋಗಕ್ಕಾಗಿ ಮಾಡಿದ ಪ್ರಯತ್ನ ವ್ಯರ್ಥವಾಗಲಿದೆ.
ಕಟಕ: ಆಧ್ಯಾತ್ಮದ ಕಡೆಗೆ ಹೆಚ್ಚು ಗಮನ ಹರಿಸಿ. ಅಧಿಕ ಧನವ್ಯಯವಾಗುವ ಸಂಭವವಿದೆ.ಸಿಂಹ: ಪೊಲೀಸ್ ಅಧಿಕಾರಿಗಳ ಜವಾಬ್ದಾರಿ ಕಡಿಮೆಯಾಗಲಿದೆ.ಕನ್ಯಾ: ಇತರರ ಮಾತು ಕೇಳಿ ನಿರ್ಧಾರ ಕೈಗೊಳ್ಳದಿರುವುದು ಸೂಕ್ತ .
ತುಲಾ: ದಿನಸಿ ವ್ಯಾಪಾರದಲ್ಲಿ ಲಾಭ. ಹಿತೈಷಿಗಳಿಂದ ಪ್ರಶಂಸೆ ದೊರೆಯಲಿದೆ.ವೃಶ್ಚಿಕ: ಆರೋಗ್ಯದ ಬಗ್ಗೆ ಗಮನ ಹರಿಸಿ.ಧನುಸ್ಸು: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.
ಮಕರ: ಮನೆಗೆ ಬಂದ ಅತಿಥಿಗಳು ನಿಮ್ಮ ಮನೆಯಲ್ಲೇ ಉಳಿದುಕೊಳ್ಳುವರು.ಕುಂಭ: ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ . ಕುಲದೇವತೆ ನಿಂದನೆ ಒಳ್ಳೆಯದಲ್ಲ.ಮೀನ: ನಿರೀಕ್ಷಿಸಿದಂತೆ ಅಧಿಕ ಧನಲಾಭ ದೊರೆಯ ಲಿದೆ. ಜನಮನ್ನಣೆ ಗಳಿಸುವಿರಿ.