ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-08-2024)
ನಿತ್ಯ ನೀತಿ :ಪಡೆದುಕೊಳ್ಳುವುದಕ್ಕಿಂತ ಉಳಿಸಿಕೊಳ್ಳುವುದು ಮುಖ್ಯ. ಹುಡುಕುವುದಕ್ಕಿಂತ ಸಿಕ್ಕಿರುವುದನ್ನು ಕಳೆದು ಹೋಗದಂತೆ ಕಾಪಾಡಿಕೊಳ್ಳುವುದು ಮುಖ್ಯ.
ಪಂಚಾಂಗ : ಗುರುವಾರ, 01-08-2024ಕ್ರೋನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಮೃಗಶಿರಾ / ಯೋಗ: ವ್ಯಾಘಾತ / ಕರಣ: ಗರಜೆ
ಸೂರ್ಯೋದಯ – ಬೆ.06.05ಸೂರ್ಯಾಸ್ತ – 06.47ರಾಹುಕಾಲ – 1.30-3.00ಯಮಗಂಡ ಕಾಲ – 6.00-7.30ಗುಳಿಕ ಕಾಲ – 9.00-10.30
ರಾಶಿಭವಿಷ್ಯಮೇಷ: ಲಾಭ ಗಳಿಸಲು ಮತ್ತು ಆರ್ಥಿಕ ಸ್ಥಿತಿ ಬಲಪಡಿಸಲು ಅನೇಕ ಅವಕಾಶಗಳು ಸಿಗಲಿವೆ.ವೃಷಭ: ಯೋಗಾಭ್ಯಾಸ ಹಾಗೂ ವೈದ್ಯರ ಸಲಹೆಯಿಂದ ಆರೋಗ್ಯ ಸುಧಾರಿಸುವುದು.ಮಿಥುನ: ಪೂರ್ವಜರ ಆಸ್ತಿಯಿಂದ ಲಾಭ ಸಿಗಲಿದೆ. ಕಿರಿಯ ಸಹೋದ್ಯೋಗಿಗಳಿಗೆ ಸಹಾಯ ಮಾಡುವಿರಿ.
ಕಟಕ: ಸಂಗಾತಿಯೊಂದಿಗೆ ಹಣಕಾಸಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಿರಿ.ಸಿಂಹ: ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಒಳ್ಳೆಯದು.ಕನ್ಯಾ: ನಿಮ್ಮ ಪ್ರೀತಿಪಾತ್ರ ರೊಂದಿಗೆ ಪ್ರಯಾಣಿಸಲು ಅವಕಾಶಗಳು ಸಿಗುತ್ತದೆ.
ತುಲಾ: ಹಣದ ವಿಷಯದಲ್ಲಿ ಸಾಮಾನ್ಯ ದಿನಕ್ಕಿಂತ ಇಂದು ಉತ್ತಮವಾಗಿರುತ್ತದೆ.ವೃಶ್ಚಿಕ: ಆಸ್ತಿ ಖರೀದಿಯಲ್ಲಿ ಅಕ ಹಣ ಹೂಡಿಕೆ ಮಾಡುವಿರಿ.ಧನುಸ್ಸು: ಹಳೆಯ ಕಾನೂನು ವಿಷಯಗಳಿಗೆ ಪರಿಹಾರ ದೊರೆಯಲಿದೆ. ದೂರ ಪ್ರಯಾಣ ಬೇಡ.
ಮಕರ: ಬೇರೊಬ್ಬರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸುವುದು ಒಳಿತು.ಕುಂಭ: ಹಣಕ್ಕೆ ಸಂಬಂಸಿದ ವಿಷಯಗಳಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಅಕ ನಷ್ಟವಾಗಲಿದೆ.ಮೀನ: ಬಹಳ ದಿನಗಳ ಕನಸನ್ನು ನನಸು ಮಾಡಿಕೊಳ್ಳುವ ಅವಕಾಶಗಳು ಲಭಿಸಲಿವೆ.