ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-08-2024)
ನಿತ್ಯ ನೀತಿ :ಬದುಕಿ, ಇತರರನ್ನು ಬದುಕಲು ಬಿಡಿ ಎಂಬುದೇ ನಮ ಜೀವನದ ಮಂತ್ರವಾಗಬೇಕು.
ಪಂಚಾಂಗ : ಶುಕ್ರವಾರ , 02-08-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ /ಕೃಷ್ಣ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಆರಿದ್ರಾ / ಯೋಗ: ಹರ್ಷಣ / ಕರಣ: ವಿಷ್ಠಿ
ಸೂರ್ಯೋದಯ – ಬೆ.06.06ಸೂರ್ಯಾಸ್ತ – 06.46ರಾಹುಕಾಲ – 10.30-12.00ಯಮಗಂಡ ಕಾಲ – 3.00-4.30ಗುಳಿಕ ಕಾಲ – 7.30-9.00
ರಾಶಿಭವಿಷ್ಯಮೇಷ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದುತ್ತೀರಿ.ವೃಷಭ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.ಮಿಥುನ: ಶತ್ರುಗಳ ಬಲೆಗೆ ಬೀಳದಂತೆ ಎಚ್ಚರ ವಹಿಸಬೇಕು. ದೂರ ಸಂಚಾರ ಮಾಡದಿರಿ.
ಕಟಕ: ನೀವು ಮಾಡುವ ಒಳ್ಳೆಯ ಕಾರ್ಯಗಳು ನಿಮ್ಮ ಕುಟುಂಬದ ಹಿರಿಮೆಯನ್ನು ಹೆಚ್ಚಿಸುತ್ತದೆ.ಸಿಂಹ: ಜೀವನ ಸಂಗಾತಿ ಯಿಂದ ಆರ್ಥಿಕ ಲಾಭ ಮತ್ತು ಗೌರವ ಪಡೆಯುವಿರಿ.ಕನ್ಯಾ:ವ್ಯವಹಾರದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾದರೆ ತೊಂದರೆ ಅನುಭವಿಸಬೇಕಾಗುತ್ತದೆ.
ತುಲಾ: ಪೋಷಕರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಬನ್ನಿ.ವೃಶ್ಚಿಕ: ಮಸಾಲೆಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸದಿರುವುದು ಒಳಿತು.ಧನುಸ್ಸು: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗಬಹುದಾದ ವಿಪತ್ತುಗಳು ದೂರವಾಗಲಿವೆ.
ಮಕರ: ನಿಮ್ಮ ಬೇಜವಾಬ್ದಾರಿತನದಿಂದಾಗಿ ಸಂಕಷ್ಟಕ್ಕೆ ಸಿಲುಕುವಿರಿ. ವ್ಯಾಸಂಗದಲ್ಲಿ ತೊಂದರೆ.ಕುಂಭ: ಹಣಕಾಸು ವ್ಯವಹಾರದಲ್ಲಿ ನಷ್ಟ ತಪ್ಪಿಸುವ ಉದ್ದೇಶದಿಂದ ಜಾಗರೂಕತೆಯಿಂದ ಇರಿ.ಮೀನ: ಕಲಾವಿದರುಗಳಿಗೆ, ಪತ್ರಕರ್ತರಿಗೆ ಪ್ರಶಂಸೆಯ ಮಾತುಗಳು ಕೇಳಿಬರುವುವು.