ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-08-2024)
ನಿತ್ಯ ನೀತಿ :ಕಷ್ಟಗಳನ್ನು ಭೇಟಿಯಾದಾಗ ತಾಳೆಗೆ ದಾರಿ ಸಿಗುತ್ತದೆ. ಅನುಮಾನಗಳನ್ನು ಭೇಟಿಯಾದಾಗ ನಿರ್ಣಯಗಳಿಗೆ ದಾರಿ ಸಿಗುತ್ತದೆ. ಹಸಿವನ್ನು ಭೇಟಿಯಾದಾಗ ಅನ್ನದ ಬೆಲೆ ಗೊತ್ತಾಗುತ್ತದೆ. ಸೋಲನ್ನು ಭೇಟಿಯಾದಾಗ ಗೆಲುವಿನ ದಾರಿ ಸಿಗುತ್ತದೆ.
ಪಂಚಾಂಗ : ಭಾನುವಾರ, 04-08-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ /ಕೃಷ್ಣ ಪಕ್ಷ / ತಿಥಿ: ಅಮಾವಾಸ್ಯೆ / ನಕ್ಷತ್ರ: ಪುಷ್ಯ / ಯೋಗ: ಸಿದ್ಧಿ / ಕರಣ: ಕಿಂಸ್ತುಘ್ನ
ಸೂರ್ಯೋದಯ – ಬೆ.06.06ಸೂರ್ಯಾಸ್ತ – 06.46ರಾಹುಕಾಲ – 4.30-6.00ಯಮಗಂಡ ಕಾಲ – 12.00-1.30ಗುಳಿಕ ಕಾಲ – 3.00-4.30
ರಾಶಿಭವಿಷ್ಯಮೇಷ: ಬೇರೊಬ್ಬರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸುವುದು ಒಳಿತು.ವೃಷಭ: ಪಿತ್ರಾರ್ಜಿತ ಆಸ್ತಿ ವಿಷಯಗಳಿಂದ ತೊಂದರೆ ಎದುರಿಸಬೇಕಾಗುತ್ತದೆ.ಮಿಥುನ: ಸಾಲದ ಚಿಂತೆ ಕಾಡಲಿದೆ. ಪಾಲುದಾರಿಕೆಯಲ್ಲಿ ಸಮಸ್ಯೆ ಉಂಟಾಗಲಿದೆ.
ಕಟಕ: ತಂದೆಯವರ ಕಠಿಣ ನಡವಳಿಕೆ ನಿಮಗೆ ಸಿಟ್ಟು ಬರಿಸುತ್ತದೆ. ಶಾಂತವಾಗಿರುವುದು ಒಳಿತು.ಸಿಂಹ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ ಯಾಗಿರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.ಕನ್ಯಾ: ನಿಮ್ಮ ಜನಪ್ರಿಯತೆ ಉತ್ತುಂಗದಲ್ಲಿರುತ್ತದೆ ಮತ್ತು ಇತರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವಿರಿ.
ತುಲಾ: ಹೊಸ ವ್ಯವಹಾರ ಪ್ರಾರಂಭಿಸಿಲು ಉತ್ತಮ ದಿನ.ವೃಶ್ಚಿಕ: ದಿನಸಿ ವ್ಯಾಪಾರಿಗಳಿಗೆ ಅಧಿಕ ಲಾಭ ಸಿಗಲಿದೆ.ಧನುಸ್ಸು: ಕೌಟುಂಬಿಕ ಮತ್ತು ವೈವಾಹಿಕ ಜೀವನ ಬಹಳ ಆಹ್ಲಾದಕರವಾಗಿರುತ್ತದೆ.
ಮಕರ: ಕೆಟ್ಟ ಆಲೋಚನೆ ಮಾಡುವುದನ್ನು ತಪ್ಪಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.ಕುಂಭ: ಸ್ನೇಹಿತರ ನೇರ ಮಾತುಗಳಿಂದ ಅವಮಾನ ಎದುರಿಸಬೇಕಾಗುತ್ತದೆ. ಹಣಕಾಸಿನ ತೊಂದರೆ.ಮೀನ: ಯಾರ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಧಿಸಲು ಹೋಗದಿರಿ. ಕಷ್ಟ ಎದುರಿಸಬೇಕಾಗುತ್ತದೆ.