ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(26-07-2024)
ನಿತ್ಯ ನೀತಿ: ಜೀವನದಲ್ಲಿ ಬೇರೆಯವರ ಎದುರು ಎಷ್ಟೇ ಸೋಲು ಕಂಡಿರಬಹುದು. ಆದರೆ, ನಿಮೊಳಗೇ ನೀವು ಸೋಲಬಾರದು ಅಷ್ಟೆ.
ಪಂಚಾಂಗ : ಶುಕ್ರವಾರ, 26-07-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ಸುಕರ್ಮಾ / ಕರಣ: ಗರಜೆ
ಸೂರ್ಯೋದಯ – ಬೆ.06.04ಸೂರ್ಯಾಸ್ತ – 06.48ರಾಹುಕಾಲ – 10.30-12.00ಯಮಗಂಡ ಕಾಲ – 3.00-4.30ಗುಳಿಕ ಕಾಲ – 7.30-9.00
ರಾಶಿಭವಿಷ್ಯ :ಮೇಷ: ಬಹಳ ದಿನಗಳ ಕನಸನ್ನು ನನಸು ಮಾಡಿಕೊಳ್ಳುವ ಅವಕಾಶಗಳು ಲಭಿಸಲಿವೆ.ವೃಷಭ: ಆಸ್ತಿ, ಅಪಾರ್ಟ್‌ ಮೆಂಟ್‌ ಖರೀದಿಯಲ್ಲಿ ಅಧಿಕ ಹಣ ಹೂಡಿಕೆ ಮಾಡುವಿರಿ.ಮಿಥುನ:ಆಸ್ತಿಯಿಂದ ಲಾಭ ಸಿಗಲಿದೆ.
ಕಟಕ: ಸಂಗಾತಿಯೊಂದಿಗೆ ಹಣಕಾಸಿನ ಸಮಸ್ಯೆ ಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಿರಿ.ಸಿಂಹ: ಯೋಗಾಭ್ಯಾಸ ಹಾಗೂ ವೈದ್ಯರ ಸಲಹೆಯಿಂದ ಆರೋಗ್ಯ ಸುಧಾರಿಸುವುದು.ಕನ್ಯಾ:ನಿಮ್ಮ ಪ್ರೀತಿಪಾತ್ರ ರೊಂದಿಗೆ ಪ್ರಯಾಣಿಸಲು ಅವಕಾಶಗಳು ಸಿಗುತ್ತದೆ.
ತುಲಾ: ಹಣದ ವಿಷಯದಲ್ಲಿ ಸಾಮಾನ್ಯ ದಿನಕ್ಕಿಂತ ಇಂದು ಉತ್ತಮವಾಗಿರುತ್ತದೆ.ವೃಶ್ಚಿಕ: ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಒಳ್ಳೆಯದು.ಧನುಸ್ಸು: ಹಳೆಯ ಕಾನೂನು ವಿಷಯಗಳಿಗೆ ಪರಿಹಾರ ದೊರೆಯಲಿದೆ. ದೂರ ಪ್ರಯಾಣ ಬೇಡ.
ಮಕರ: ಬೇರೊಬ್ಬರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸುವುದು ಒಳಿತು.ಕುಂಭ: ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಅಧಿಕ ನಷ್ಟವಾಗಲಿದೆ.ಮೀನ: ಲಾಭ ಗಳಿಸಲು ಮತ್ತು ಆರ್ಥಿಕ ಸ್ಥಿತಿ ಬಲಪಡಿಸಲು ಅನೇಕ ಅವಕಾಶಗಳು ಸಿಗಲಿವೆ.