ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-08-2024)
ನಿತ್ಯ ನೀತಿ :ಪೆಟ್ಟು ತಿಂದ ಕಲ್ಲು ಮೂರ್ತಿಯಾಯಿತು. ಆದರೆ, ಪೆಟ್ಟು ಕೊಟ್ಟ ಸುತ್ತಿಗೆ ಸುತ್ತಿಗೆಯಾಗೇ ಉಳಿಯಿತು. ನೋವು ಕೊಡುವವರು ಹಾಗೆಯೇ ಉಳಿಯುತ್ತಾರೆ. ನೋವನ್ನುಂಡವರು ಜ್ಞಾನಿಗಳಾಗುತ್ತಾರೆ.
ಪಂಚಾಂಗ : ಭಾನುವಾರ , 11-08-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಸ್ವಾತಿ / ಯೋಗ: ಶುಭ / ಕರಣ: ಗರಜೆಸೂರ್ಯೋದಯ – ಬೆ.06.07ಸೂರ್ಯಾಸ್ತ – 06.43ರಾಹುಕಾಲ – 4.30-6.00ಯಮಗಂಡ ಕಾಲ – 12.00-1.30ಗುಳಿಕ ಕಾಲ – 3.00-4.30
ರಾಶಿಭವಿಷ್ಯಮೇಷ:ಯಂತ್ರೋಪಕಣ ದುರಸ್ತಿ ಮಾಡುವವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಸಿಗಲಿದೆ.ವೃಷಭ:ಹಣದ ವಿಷಯದಲ್ಲಿ ದೊಡ್ಡ ಸಮಸ್ಯೆ ಇರುವುದಿಲ್ಲ. ಮನಸ್ಸಿಗೆ ನೆಮ್ಮದಿ ಸಿಗಲಿದೆ.ಮಿಥುನ:ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.
ಕಟಕ:ಮಾನಸಿಕ ಒತ್ತಡ ತೊಡೆದುಹಾಕಲು ಪ್ರಯತ್ನಿಸಿ. ಓದಿನ ಬಗ್ಗೆ ಕಾಳಜಿ ಇರಲಿ.ಸಿಂಹ: ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುವವರಿಗೆ ಜನಸಾಮಾನ್ಯರಿಂದ ಉತ್ತಮ ಪ್ರೋತ್ಸಾಹ ದೊರೆಯಲಿದೆ.ಕನ್ಯಾ: ಉನ್ನತ ಅಽಕಾರಿ ಗಳು ನಿಮ್ಮ ಮೇಲೆ ಕೋಪಗೊಳ್ಳು ವರು. ಎಚ್ಚರಿಕೆಯಿಂದಿರಿ.
ತುಲಾ: ಉದ್ಯಮಿಗಳು ಹೊಸ ಶಾಖೆ ತೆರೆಯಲು ಬೇಕಾದ ಅನುಕೂಲಗಳು ಒದಗುತ್ತವೆ.ವೃಶ್ಚಿಕ: ಸಾಲಗಾರರ ಕಿರಿಕಿರಿ ಉಂಟಾಗಲಿದೆ. ಮಕ್ಕಳ ವಿಷಯದಲ್ಲಿ ಚಿಂತೆ ಕಾಡಲಿದೆ.ಧನುಸ್ಸು: ಉದ್ಯೋಗ ಬದಲಾವಣೆಗೆ ಉತ್ತಮ ಸಮಯ ಮತ್ತು ಹೊಸ ಅವಕಾಶಗಳು ಸಿಗಲಿವೆ.
ಮಕರ: ಸರಿಯಾದ ಗುರಿ ಮುಟ್ಟಲು ನಿಮಗೆ ಗುರುಗಳ ಮಾರ್ಗದರ್ಶನ ಅತ್ಯವಶ್ಯಕ.ಕುಂಭ: ಹಣದ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.ಮೀನ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ದೂರ ಪ್ರಯಾಣ ಮಾಡದಿರಿ.