ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-08-2024)
ನಿತ್ಯ ನೀತಿ :ಮನುಷ್ಯನ ನಿಜವಾದ ಆಸ್ತಿ ಅವನ ಆರೋಗ್ಯ. ಆರೋಗ್ಯವು ಅವನ ಕೈ ಬಿಟ್ಟ ದಿನ ಮನುಷ್ಯನು ಪ್ರತಿಯೊಂದು ಸಂಬಂಧಕ್ಕೂ ಹೊರೆಯಾಗುತ್ತಾನೆ.
ಪಂಚಾಂಗ : ಸೋಮವಾರ , 12-08-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಸ್ವಾತಿ / ಯೋಗ: ಶುಕ್ಲ / ಕರಣ: ವಿಷ್ಠಿಸೂರ್ಯೋದಯ – ಬೆ.06.07ಸೂರ್ಯಾಸ್ತ – 06.42ರಾಹುಕಾಲ – 7.30-9.00ಯಮಗಂಡ ಕಾಲ – 10.30-12.00ಗುಳಿಕ ಕಾಲ – 1.30-3.00
ರಾಶಿಭವಿಷ್ಯ:ಮೇಷ: ಅಪರೂಪದ ಅತಿಥಿ ಆಗಮನದಿಂದ ಮನಸ್ಸಿಗೆ ಸಂತೋಷವಾಗಲಿದೆ.ವೃಷಭ: ವಸಾ್ತ್ರಭರಣ ಖರೀದಿಸುವ ಸಾಧ್ಯತೆ ಇದೆ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ.ಮಿಥುನ: ಕಾರ್ಯ ಸಾಮರ್ಥ್ಯವನ್ನು ಅರ್ಥಮಾಡಿ ಕೊಂಡು ಆದಾಯ ಹೆಚ್ಚಿಸುವ ಕೆಲಸ ಮಾಡಿ.
ಕಟಕ: ಕಷ್ಟದ ಕೆಲಸವನ್ನು ಇಷ್ಟದಿಂದ ಮಾಡಿ. ಮನಸ್ಸು ಸಮಾಧಾನ ದಿಂದಿರುತ್ತದೆ.ಸಿಂಹ: ವ್ಯವಹಾರದಲ್ಲಿ ಶತ್ರು ಗಳಿಂದ ತೊಂದರೆ. ಅವಿವಾಹಿತರಿಗೆ ವಿವಾಹ ನಿಶ್ಚಯ.ಕನ್ಯಾ: ಷೇರು ಮಾರುಕಟ್ಟೆ ಯಲ್ಲಿ ಹಣ ಹೂಡಿಕೆ ಮಾಡು ವವರು ಎಚ್ಚರಿಕೆಯಿಂದಿರಿ.
ತುಲಾ: ನಂಬಿದ ಜನರಿಂದ ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಎಚ್ಚರಿಕೆಯಿಂದಿರಿ.ವೃಶ್ಚಿಕ: ವ್ಯಾಪಾರದಲ್ಲಿ ಶತ್ರುಗಳ ಕಾಟ. ನಿವೇಶನ ಖರೀದಿಗೆ ನಿರ್ಧಾರ ಮಾಡುವಿರಿ.ಧನುಸ್ಸು: ವಿವಾಹಿತ ದಂಪತಿ ಸ್ಮರಣೀಯ ಕ್ಷಣ ಗಳನ್ನು ಕಳೆಯಲು ಸಣ್ಣ ಪ್ರವಾಸಕ್ಕೆ ಹೋಗಬಹುದು.
ಮಕರ: ಜವಾಬ್ದಾರಿ ಸ್ವೀಕರಿಸುವ ಮೊದಲು ಅದನ್ನು ನಿಭಾಯಿಸುವ ಬಗ್ಗೆ ಯೋಚಿಸಿ.ಕುಂಭ: ಕೌಟುಂಬಿಕ ಕಲಹ ಬೀದಿಗೆ ಬರುವ ಸಾಧ್ಯತೆ ಇದೆ. ಮಾತಿಗಿಂತ ವೌನವಾಗಿರಿ.ಮೀನ: ಯೋಗ ಧ್ಯಾನ ಮಾಡುವುದರಿಂದ ಹೆಚ್ಚು ಪ್ರಯೋಜನಕಾರಿಯಾಗಿದೆ.