ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-08-2024)
ನಿತ್ಯ ನೀತಿ :ಜೀವನ ಸಾಗಿಸಲು ಜಾಸ್ತಿ ಹಣ ಬೇಕಾಗಿಲ್ಲ. ಆದರೆ, ಇನ್ನೊಬ್ಬರನ್ನು ನೋಡಿ ಜೀವನ ಸಾಗಿಸಲು ಎಷ್ಟು ಹಣವಿದ್ದರೂ ಸಾಕಾಗುವುದಿಲ್ಲ.
ಪಂಚಾಂಗ : ಬುಧವಾರ , 14-08-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ /ಶುಕ್ಲ ಪಕ್ಷ / ತಿಥಿ: ನವಮಿ / ನಕ್ಷತ್ರ: ಅನುರಾಧಾ / ಯೋಗ: ಐಂದ್ರ / ಕರಣ: ತೈತಿಲ
ಸೂರ್ಯೋದಯ – ಬೆ.06.07ಸೂರ್ಯಾಸ್ತ – 06.41ರಾಹುಕಾಲ – 12.00-1.30ಯಮಗಂಡ ಕಾಲ – 7.30-9.00ಗುಳಿಕ ಕಾಲ – 10.30-12.00
ರಾಶಿಭವಿಷ್ಯ :ಮೇಷ: ಅಗತ್ಯವಿರುವ ವಸ್ತುಗಳನ್ನು ಖರೀದಿಸು ವುದು ಒಳಿತು. ಸಿಕ್ಕಾಪಟ್ಟೆ ಖರ್ಚು ಮಾಡದಿರಿ.ವೃಷಭ: ಕೆಲವು ದಾಖಲೆಗಳ ಹುಡುಕಾಟದಲ್ಲೇ ಹೆಚ್ಚು ಸಮಯ ಕಳೆಯುವುದರಿಂದ ಸಮಯ ವ್ಯರ್ಥವಾಗಲಿದೆ. ಆದಾಯ ಕಡಿಮೆಯಾಗಲಿದೆ.ಮಿಥುನ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ ಮತ್ತು ಅದರಲ್ಲಿ ನೀವು ಯಶಸ್ಸು ಸಾಧಿಸುವಿರಿ.
ಕಟಕ: ಆಹಾರ ವ್ಯತ್ಯಾಸ ದಿಂದ ಪಿತ್ತ ಸಂಬಂಧಿ ಅನಾರೋಗ್ಯ ಕಾಡಬಹುದು.ಸಿಂಹ: ಕಟ್ಟಡ ನಿರ್ಮಾಣಗಾರರಿಗೆ ಹೆಚ್ಚಿನ ಕೆಲಸ ಇರುವುದು.ಕನ್ಯಾ: ಹಲವು ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಅನಾಯಾಸವಾಗಿ ಮುಗಿಯಲಿವೆ.
ತುಲಾ: ವಿದ್ಯೆ ಸಂಪಾದನೆ ಕಡೆ ಗಮನ ಹರಿಸಿದರೆ ಯಶಸ್ಸು ಸಾಧಿಸುವಿರಿ.ವೃಶ್ಚಿಕ: ಬಂಧುಗಳು ನೀಡುವ ಸಲಹೆ- ಸೂಚನೆಗಳಿಂದ ಸಮಸ್ಯೆಗಳು ದೂರವಾಗಲಿವೆ.ಧನುಸ್ಸು: ಲೋಹದ ವಸ್ತುಗಳನ್ನು ವ್ಯಾಪಾರ ಮಾಡುವವರಿಗೆ ದುಪ್ಪಟ್ಟು ಲಾಭ ಸಿಗಲಿದೆ.
ಮಕರ: ಕೆಲಸದ ಸ್ಥಳದಲ್ಲಿ ಹಿರಿಯ ಸಹೋದ್ಯೋಗಿ ಗಳಿಂದ ಸಲಹೆಗಳು ಮತ್ತು ಸಹಾಯ ಸಿಗಲಿದೆ.ಕುಂಭ: ಅತ್ತೆ ಕಡೆಯಿಂದ ಮಾನಸಿಕ ಒತ್ತಡ, ಕಿರುಕುಳ ಎದುರಿಸಬೇಕಾಗಬಹುದು.ಮೀನ: ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ.