ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-08-2024)
ನಿತ್ಯ ನೀತಿ :ಅಮ್ಮನ ಮುಂದೆ, ಅನ್ನದ ಮುಂದೆ ಅಹಂಕಾರ ತೋರಿಸಿ ಉದ್ಧಾರ ಆದವರು ಯಾರೂ ಇಲ್ಲ.ಹಸಿವಾದಾಗ ಕರೆಯಲು ಅಮ್ಮ ಬೇಕು. ಹಸಿವಾದಾಗ ತಿನ್ನಲು ಅನ್ನ ಬೇಕು.
ಪಂಚಾಂಗ : ಶುಕ್ರವಾರ, 16-08-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಮೂಲಾ / ಯೋಗ: ವಿಷ್ಕಂಭ / ಕರಣ: ಭವಸೂರ್ಯೋದಯ – ಬೆ.06.06ಸೂರ್ಯಾಸ್ತ – 06.40ರಾಹುಕಾಲ – 10.30-12.00ಯಮಗಂಡ ಕಾಲ – 3.00-4.30ಗುಳಿಕ ಕಾಲ – 7.30-9.00
ರಾಶಿಭವಿಷ್ಯ :ಮೇಷ: ಮೋಜು – ಮಸ್ತಿಯಲ್ಲಿ ತೊಡಗುವಿರಿ.ವೃಷಭ: ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದರಿಂದ ಸಂಬಂಧಗಳು ಗಟ್ಟಿಗೊಳ್ಳಲಿವೆ.ಮಿಥುನ:ತಾಳ್ಮೆ ವಹಿಸುವುದು ಒಳ್ಳೆಯದು.
ಕಟಕ: ಹಣದ ಕೊರತೆ ಇರುವುದಿಲ್ಲ.ಸಿಂಹ: ಹೊಸ ವ್ಯವಹಾರ ವನ್ನು ಪ್ರಾರಂಭಿಸಿದ್ದರೆ, ಪ್ರಚಾರ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸಿ.ಕನ್ಯಾ: ಆರೋಗ್ಯದ ಕಡೆ ಗಮನ ಹರಿಸಿ.
ತುಲಾ: ಯಾರದೋ ಮೇಲಿನ ಸವಾಲಿಗೆ ಹೆಚ್ಚು ಸಾಲ ಮಾಡಿದರೆ ತೀರಿಸಲು ಕಷ್ಟವಾಗಲಿದೆ.ವೃಶ್ಚಿಕ: ವಿದ್ಯೆ ಸಂಪಾದನೆ ಕಡೆ ಗಮನ ಹರಿಸಿದರೆ ಯಶಸ್ಸು ಸಾಧಿಸುವಿರಿ. ಆದಾಯ ಹೆಚ್ಚಲಿದೆ.ಧನುಸ್ಸು: ಬೂರಿ ಭೋಜನ ಮಾಡುವಿರಿ.
ಮಕರ: ಮಡದಿಯೊಂದಿಗೆ ಸಂಸಾರಕ್ಕೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸುವಿರಿ.ಕುಂಭ: ಕೆಲವು ದಾಖಲೆಗಳ ಹುಡುಕಾಟದಲ್ಲೇ ಹೆಚ್ಚು ಸಮಯ ವ್ಯರ್ಥವಾಗಲಿದೆ.ಮೀನ: ಬುದ್ಧಿವಂತಿಕೆಯಿಂದ ಹಣ ಹೂಡಿಕೆ ಮಾಡಬೇಕಾಗುತ್ತದೆ.