ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(22-08-2024)
ನಿತ್ಯ ನೀತಿ :ಬಾಡಿಗೆ ಕಟ್ಟುವಾಗ ಸ್ವಂತ ಮನೆಯ ಬೆಲೆ, ಹಸಿವಾದಾಗ ಅನ್ನದ ಬೆಲೆ, ಕೆಲಸ ಇಲ್ಲದಾಗ ಹಣದ ಬೆಲೆ, ದೂರವಾದಾಗ ಮನುಷ್ಯನ ಬೆಲೆ, ಸೋತಾಗ ಗೆಲುವಿನ ಬೆಲೆ ತಿಳಿಯುತ್ತದೆ.
ಪಂಚಾಂಗ : ಗುರುವಾರ , 22-08-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಉತ್ತರಾಭಾದ್ರ / ಯೋಗ: ಧೃತಿ /ಕರಣ: ಭವ
ಸೂರ್ಯೋದಯ – ಬೆ.06.08ಸೂರ್ಯಾಸ್ತ – 06.37ರಾಹುಕಾಲ – 1.30-3.00ಯಮಗಂಡ ಕಾಲ – 6.00-7.30ಗುಳಿಕ ಕಾಲ – 9.00-10.30
ರಾಶಿಭವಿಷ್ಯ :ಮೇಷ:ಕೃಷಿಯಲ್ಲಿ ಅಭಿವೃದ್ಧಿ ಕಾಣುವಿರಿ.ವೃಷಭ: ವಧು ಅಥವಾ ವರನನ್ನು ಹುಡುಕುತ್ತಿದ್ದಲ್ಲಿ ಸೂಕ್ತ ಸಂಬಂಧ ದೊರೆಯುವುದು ಕಷ್ಟ.ಮಿಥುನ: ದೂರ ಪ್ರಯಾಣ ಬೇಡ.
ಕಟಕ: ಅಪವಾದಕ್ಕೆ ಗುರಿ ಮಾಡುವ ಹಿತಶತ್ರು ಗಳಿಂದ ದೂರವಿರುವುದು ಬಹಳ ಒಳಿತು.ಸಿಂಹ: ಯಾರ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಧಿಸಲು ಹೋಗದಿರಿ.ಕನ್ಯಾ:.ವ್ಯಾಪಾರಿಗಳಿಗೆ ಲಾಭ.
ತುಲಾ: ಇತರರೊಂದಿಗೆ ಸೇರಿ ಮಾಡುವ ಕೆಲಸದಲ್ಲಿ ಉತ್ತಮ ಲಾಭ ದೊರೆಯಲಿದೆ.ವೃಶ್ಚಿಕ: ವ್ಯಾಪಾರ- ವ್ಯವಹಾರಗಳಲ್ಲಿ ಬುದ್ಧಿವಂತಿಕೆಯಿಂದ ಹಣ ಹೂಡಿಕೆ ಮಾಡಬೇಕಾಗುತ್ತದೆ.ಧನುಸ್ಸು: ವೃತ್ತಿಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ.
ಮಕರ: ಮದುವೆಯ ಸಲುವಾಗಿ ವಸಾ್ತ್ರಭರಣ ಖರೀದಿ ಮಾಡುವಿರಿ.ಕುಂಭ: ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ.ಮೀನ: ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆಯಿದೆ.