ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(28-08-2024)

ನಿತ್ಯ ನೀತಿ :ಜೀವನ ಮತ್ತು ಕಾಲ ಎರಡೂ ಶ್ರೇಷ್ಠ ಶಿಕ್ಷಕರಿದ್ದಂತೆ. ಜೀವನವು ಕಾಲದ ಸದ್ಬಳಕೆಯನ್ನು ಬೋಧಿಸಿದರೆ, ಕಾಲವು ಜೀವನದ ಮೌಲ್ಯವನ್ನು ನಮಗೆ ಬೋಧಿಸುತ್ತದೆ.
ಪಂಚಾಂಗ : ಬುಧವಾರ, 28-08-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ / ನಕ್ಷತ್ರ: ಮೃಗಶಿರಾ / ಯೋಗ: ವಜ್ರ /ಕರಣ: ವಣಿಜ್
ಸೂರ್ಯೋದಯ – ಬೆ.06.08ಸೂರ್ಯಾಸ್ತ – 06.33ರಾಹುಕಾಲ – 12.00-1.30ಯಮಗಂಡ ಕಾಲ – 7.30-9.00ಗುಳಿಕ ಕಾಲ – 10.30-12.00
ರಾಶಿಭವಿಷ್ಯ:ಮೇಷ: ಅಗತ್ಯವಿರುವ ವಸ್ತುಗಳನ್ನು ಖರೀದಿಸು ವುದು ಒಳಿತು. ಸಿಕ್ಕಾಪಟ್ಟೆ ಖರ್ಚು ಮಾಡದಿರಿ.ವೃಷಭ: ಪೊಲೀಸ್‌ ಅಧಿ ಕಾರಿಗಳ ಜವಾಬ್ದಾರಿ ಕಡಿಮೆ ಯಾಗಲಿದೆ. ಅನೇಕ ಅಡೆತಡೆಗಳು ದೂರವಾಗಲಿವೆ.ಮಿಥುನ: ಹಿಂದೆ ನೀವು ಮಾಡಿದ್ದ ಕೆಲವು ಪ್ರಯತ್ನಗಳು ಫಲ ಸಿಗುವ ಸಾಧ್ಯತೆಗಳಿವೆ.
ಕಟಕ: ಕಲಾವಿದರಿಗೆ ಒಳ್ಳೆಯ ಅವಕಾಶಗಳು ದೊರೆಯಲಿವೆೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದಿರಿ.ಸಿಂಹ: ಉನ್ನತ ಅಧಿ ಕಾರಿ ಭೇಟಿಗಾಗಿ ದಿನವಿಡೀ ಓಡಾಡಬೇಕಾದ ಪರಿಸ್ಥಿತಿ ಎದುರಾಗಲಿದೆ.ಕನ್ಯಾ: ಬ್ಯಾಂಕ್‌ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿರುವುದು.
ತುಲಾ: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳದಿರಿ.ವೃಶ್ಚಿಕ: ಮಕ್ಕಳಿಂದ ಸಂತೋಷ ಉಂಟಾಗುವುದು. ಆರೋಗ್ಯದ ಕಡೆ ಗಮನ ಹರಿಸಿ.ಧನುಸ್ಸು: ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರುವುದು ಬಹಳ ಒಳ್ಳೆಯದು.
ಮಕರ: ನಿಮ್ಮ ವರ್ಚಸ್ಸಿನ ಪ್ರಭಾವದಿಂದ ವಿನೂತನ ಅವಕಾಶಗಳು ದೊರೆಯಲಿವೆ.ಕುಂಭ: ಶತ್ರುಗಳನ್ನು ಜಯಿಸುವಿರಿ. ನಿಮ್ಮ ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿದೆ.ಮೀನ: ಆಹಾರ ವ್ಯತ್ಯಾಸದಿಂದ ಪಿತ್ತ ಸಂಬಂಧಿ ಅನಾರೋಗ್ಯ ಕಾಡಬಹುದು.