ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-09-2024)

ನಿತ್ಯ ನೀತಿ :ಸಂತೋಷ, ನಂಬಿಕೆ ಎನ್ನುವುದು ಮಾರಾಟಕ್ಕೆ ದೊರಕುವುದಿಲ್ಲ. ಸಂತೋಷವನ್ನು ಮನುಷ್ಯರ ಬಳಿ ಹಂಚಿಕೊಳ್ಳಬೇಕು. ನಂಬಿಕೆಯನ್ನು ಮನಸ್ಸಿನಿಂದ ಹಂಚಿಕೊಳ್ಳಬೇಕು.
ಪಂಚಾಂಗ : ಶುಕ್ರವಾರ , 06-09-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಹಸ್ತ / ಯೋಗ: ಶುಕ್ಲ / ಕರಣ: ವಣಿಜ್
ಸೂರ್ಯೋದಯ – ಬೆ.06.09ಸೂರ್ಯಾಸ್ತ – 06.27ರಾಹುಕಾಲ – 10.30-12.00ಯಮಗಂಡ ಕಾಲ – 3.00-4.30ಗುಳಿಕ ಕಾಲ – 7.30-9.00
ರಾಶಿಭವಿಷ್ಯ :ಮೇಷ: ಹವಾಮಾನ ವೈಪರೀತ್ಯದಿಂದಾಗಿ ದೂರ ಪ್ರಯಾಣ ರದ್ದು ಮಾಡಬೇಕಾಗಬಹುದು.ವೃಷಭ: ವ್ಯಾಪಾರದಲ್ಲಿ ಅನುಕೂಲವಾಗಲಿದೆ. ಸಂಗಾತಿ ಮನೆ ಕಡೆಯಿಂದ ಶುಭ ಸುದ್ದಿ ಬರಲಿದೆ.ಮಿಥುನ: ತಾಳ್ಮೆಯಿಂದ ವರ್ತಿಸಿದರೆ ಗೆಲುವು ನಿಮಗೆ ಕಟ್ಟಿಟ್ಟ ಬುತ್ತಿ ಎಂಬ ಅರಿವಿರಲಿ.
ಕಟಕ: ಯಾರನ್ನೂ ಅತಿಯಾಗಿ ನಂಬಲು ಹೋಗ ದಿರಿ. ಪರಾವಲಂಬನೆಯಿಂದ ಅಪಾಯವೇ ಹೆಚ್ಚು.ಸಿಂಹ: ಪಿತ್ರಾರ್ಜಿತ ಆಸ್ತಿ ವಿಚಾರದ ಮಾತುಕತೆ ನಡೆಯಲಿದೆ. ವಾಹನದಿಂದ ಅಪಾಯ ಎದುರಾಗಲಿದೆ.ಕನ್ಯಾ: ಹೊಸ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ತುಲಾ: ಕೌಟುಂಬಿಕ ಮತ್ತು ವೈವಾಹಿಕ ಜೀವನ ಆಹ್ಲಾದಕರವಾಗಿರುತ್ತದೆ.ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.ಧನುಸ್ಸು: ದುಡುಕು ಮಾತುಗಳನ್ನಾಡದಿರಿ. ಆಟಗಾರರಿಗೆ ನಿರೀಕ್ಷಿತ ಫಲ ಸಿಗಲಿದೆ.
ಮಕರ: ಹೆಚ್ಚಿನ ಲಾಭದ ಆಸೆಗೆ ಇರುವ ಉಳಿತಾಯದ ಹಣವನ್ನು ಖರ್ಚು ಮಾಡದಿರಿ.ಕುಂಭ: ಹೊಸ ಪ್ರದೇಶಕ್ಕೆ ಭೇಟಿ ನೀಡುವ ಅವಕಾಶವೊಂದು ದಿಢೀರನೆ ಒದಗಿಬರಲಿದೆ.ಮೀನ: ಸೇವೆಯ ಆಧಾರದ ಮೇಲೆ ಕೆಲಸದಲ್ಲಿ ಬಡ್ತಿ ದೊರೆಯಲಿದೆ. ಹೆಚ್ಚು ಲಾಭ ಗಳಿಸುವಿರಿ.