ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-09-2023)
ನಿತ್ಯ ನೀತಿ: ಹೊಸ ಚಿಂತನೆಗಳು ನಾವೀನ್ಯತೆಯ ಆಯಾಮವನ್ನು ಸೃಷ್ಟಿಸುತ್ತದೆ. ಮೂಡುವ ಸತ್ ಚಿಂತನೆಗಳು ಕೂಡಲೇ ಅನುಷ್ಠಾನಗೊಳಿಸಬೇಕು.
ಪಂಚಾಂಗ ಶುಕ್ರವಾರ 29-09-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ಹುಣ್ಣಿಮೆ / ನಕ್ಷತ್ರ: ಉತ್ತರಾಭಾದ್ರ / ಯೋಗ: ವೃದ್ಧಿ / ಕರಣ: ಬಾಲವ
ಸೂರ್ಯೋದಯ : ಬೆ.06.09ಸೂರ್ಯಾಸ್ತ : 06.11ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00
ರಾಶಿ ಭವಿಷ್ಯಮೇಷ: ಬಹಳ ದಿನಗಳ ನಂತರ ಸ್ನೇಹಿತರೊಂದಿಗೆ ಸಂತೋಷವಾಗಿ ಹೆಚ್ಚು ಸಮಯ ಕಳೆಯುವಿರಿ.ವೃಷಭ: ಆಸ್ತಿ ವಿಚಾರದಲ್ಲಿ ಶುಭ. ತೊಂದರೆಗಳು ದೂರವಾಗಲಿವೆ. ಗೃಹ ನಿರ್ಮಾಣಕ್ಕೆ ಚಿಂತಿಸುವಿರಿ.ಮಿಥುನ: ಸಂಗಾತಿ ಹಾಗೂ ಕುಟುಂಬದೊಂದಿಗಿನ ಬಾಂಧವ್ಯವು ಬಹಳ ಉತ್ತಮವಾಗಿರುತ್ತದೆ.
ಕಟಕ: ಹಿರಿಯ ಸಹೋದರ -ಸಹೋದರಿಯ ರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ.ಸಿಂಹ: ಅನಿರೀಕ್ಷಿತ ಖರ್ಚು ತಲೆದೋರಬಹುದು. ವೈದ್ಯರಿಗೆ ಶುಭದಾಯಕ ದಿನ.ಕನ್ಯಾ: ಮನೆಯ ಜವಾಬ್ದಾರಿ ಅರ್ಥ ಮಾಡಿಕೊಂಡು ಅವುಗಳನ್ನು ನಿಭಾಯಿಸಬೇಕು.
ತುಲಾ: ಜವಾಬ್ದಾರಿಗಳನ್ನು ಪೂರೈಸಿ. ಖಂಡಿತ ವಾಗಿಯೂ ಉನ್ನತ ಮಟ್ಟಕ್ಕೆ ಏರುವಿರಿ.ವೃಶ್ಚಿಕ: ಕಚೇರಿಯಲ್ಲಿ ಹಿರಿಯ ಅಕಾರಿಗಳನ್ನು ನಿರ್ಲಕ್ಷಿಸಿದಲ್ಲಿ ದೊಡ್ಡ ತೊಂದರೆಯಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ.ಧನುಸ್ಸು: ವಿದ್ಯಾರ್ಥಿಗಳು ಸಾಧ್ಯವಾದರೆ ಸ್ನೇಹಿತ ರೊಂದಿಗೆ ಅಧ್ಯಯನ ಮಾಡುವುದು ಒಳಿತು.
ಮಕರ: ಸಣ್ಣ ವ್ಯಾಪಾರಸ್ಥರಿಗೆ ಅನುಕೂಲಕರ ದಿನ. ಲಾಭ ಗಳಿಸಲು ಹಲವು ಅವಕಾಶಗಳು ಒದಗಲಿವೆ.ಕುಂಭ: ಗುರು-ಹಿರಿಯರ ಆಶೀರ್ವಾದದಿಂದ ಕೆಲಸ ಸುಗಮವಾಗಲಿದೆ. ಸ್ನೇಹಿತನಿಗೆ ನಿಮ್ಮಿಂದ ಬೇಸರವಾಗಬಹುದು. ರಫ್ತು ವ್ಯಾಪಾರದಲ್ಲಿ ಲಾಭ.ಮೀನ: ಕೆಲಸದ ಹೊರೆ ಹೆಚ್ಚಿದ್ದರೆ, ಭಯಪಡುವ ಬದಲು ಕಷ್ಟಪಟ್ಟು ಕೆಲಸ ಮಾಡಿ.