ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-10-2023)
ನಿತ್ಯ ನೀತಿ :ದೈವೀಶಕ್ತಿಯ ಅನುಭವದ ಅನುಭೂತಿ ಸರ್ವ ತಾಪತ್ರಯಗಳನ್ನು ನೀಗಿ ಸರ್ವಸಮರ್ಥರ ನ್ನಾಗಿಸುವುದರ ಜತೆಗೆ ಕ್ರಿಯಾಶೀಲ, ತೀಕ್ಷ್ಣತಮ ಬುದ್ಧಿಶಕ್ತಿಯುಳ್ಳವರನ್ನಾಗಿಸುತ್ತದೆ.
ಪಂಚಾಂಗ ಶುಕ್ರವಾರ 06-10-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಆರಿದ್ರಾ / ಯೋಗ: ಪರಿಘ / ಕರಣ: ಬಾಲವ
ಸೂರ್ಯೋದಯ : ಬೆ.06.09ಸೂರ್ಯಾಸ್ತ : 06.07ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00
ರಾಶಿ ಭವಿಷ್ಯಮೇಷ: ಅವಸರದ ಹೆಜ್ಜೆ ಹಾಕುವ ಮುನ್ನ ಯೋಚಿಸುವುದು ಒಳಿತು. ಎಲ್ಲ ಕಾರ್ಯಗಳು ಸಮಯಕ್ಕೆ ಸರಿಯಾಗಿ ನಡೆಯುತ್ತವೆ.ವೃಷಭ: ಬೇರೊಬ್ಬರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸುವುದು ಒಳಿತು.ಮಿಥುನ: ಮೇಲಧಿಕಾರಿಗಳ ಮೆಚ್ಚುಗೆ ಪಡೆಯಲು ಶ್ರಮ ವಹಿಸಿ ಕೆಲಸ ಮಾಡಿ.
ಕಟಕ: ಆರ್ಥಿಕ ಏರುಪೇರಿನಿಂದಾಗಿ ಕುಟುಂಬದಲ್ಲಿ ಅಹಿತಕರ ವಾತಾವರಣ ಉಂಟಾಗಲಿದೆ.ಸಿಂಹ: ಶುಭ ಸಮಾರಂಭಕ್ಕೆ ಹೋಗಲು ಆರೋಗ್ಯ ಸಮಸ್ಯೆ ಎದುರಾಗಬಹುದು.ಕನ್ಯಾ: ಯಾರದೋ ಮೇಲಿನ ಸವಾಲಿಗೆ ಹೆಚ್ಚು ಸಾಲ ಮಾಡಿದರೆ ತೀರಿಸಲು ಕಷ್ಟವಾಗಲಿದೆ.
ತುಲಾ: ಸಮಾಧಾನದಿಂದ ಕೆಲಸ ಮಾಡುವುದನ್ನು ಕಲಿಯಿರಿ. ಒತ್ತಡಕ್ಕೆ ಒಳಗಾಗದಿರಿ.ವೃಶ್ಚಿಕ: ಕುಟುಂಬದ ಹಿರಿಯರಿಗೆ ಪ್ರಾಮುಖ್ಯತೆ ನೀಡಿ. ಹೊಸ ವ್ಯವಹಾರ ಪ್ರಾರಂಭಿಸಿ.ಧನುಸ್ಸು: ಸಾಧ್ಯವಾದಷ್ಟು ರಾತ್ರಿ ಪ್ರಯಾಣ ಮಾಡ ಬೇಡಿ. ಎಲ್ಲ ಕಾರ್ಯಗಳನ್ನೂ ಎಚ್ಚರಿಕೆಯಿಂದ ನಿರ್ವಹಿಸಿ.
ಮಕರ: ದುಷ್ಟ ಜನರ ಸಹವಾಸದಿಂದ ದೂರವಿರು ವುದು ಒಳಿತು. ಸುಖ ಭೋಜನ ಮಾಡುವಿರಿ.ಕುಂಭ: ಹೊಸ ವಾಹನ ಖರೀದಿಸುವ ಆಲೋಚನೆಯನ್ನು ಮುಂದೂಡುವುದು ಒಳಿತು.ಮೀನ: ಕೌಟುಂಬಿಕ ಮತ್ತು ವೈವಾಹಿಕ ಜೀವನ ಬಹಳ ಆಹ್ಲಾದಕರವಾಗಿರುತ್ತದೆ.