ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-10-2023)
ನಿತ್ಯ ನೀತಿ :ಎರಡು ಕೈಗಳಿಂದ ಒಂದೇ ಬಾರಿಗೆ ಐವತ್ತು ಜನರನ್ನು ಹೊಡೆಯಲಾಗದು. ಆದರೆ ಎರಡು ಕೈಗಳನ್ನು ಜೋಡಿಸಿ ನಮಿಸುವುದರಿಂದ ಕೋಟ್ಯಂತರ ಜನರ ಹೃದಯವನ್ನು ಗೆಲ್ಲಬಹುದು.
ಪಂಚಾಂಗ ಸೋಮವಾರ 09-10-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ / ನಕ್ಷತ್ರ: ಆಶ್ಲೇಷಾ / ಯೋಗ: ಸಿದ್ಧ / ಕರಣ: ಭವ
ಸೂರ್ಯೋದಯ : ಬೆ.06.09ಸೂರ್ಯಾಸ್ತ : 06.05ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ : 1.30-3.00
ರಾಶಿ ಭವಿಷ್ಯಮೇಷ: ಕೆಲಸ-ಕಾರ್ಯಗಳಲ್ಲಿ ಅಲ್ಪ ವಿಳಂಬವಾಗಲಿದೆ. ಅಲಂಕಾರಿಕ ವಸ್ತುಗಳನ್ನು ಖರೀದಿಸುವಿರಿ.ವೃಷಭ: ಹತ್ತಿರದ ಸ್ನೇಹಿತರಿಂದಲೇ ನಿಮ್ಮ ಬಗ್ಗೆ ಕೆಟ್ಟ ಮಾತುಗಳು ಕೇಳಿಬರಲಿವೆ.ಮಿಥುನ: ಅನಿರೀಕ್ಷಿತ ಖರ್ಚು ಹೆಚ್ಚಾಗಲಿದೆ. ಮಾನಸಿಕ ಒತ್ತಡ.
ಕಟಕ: ಮಾನಸಿಕ ಧೈರ್ಯ, ಸಾಮಥ್ರ್ಯ ಹೆಚ್ಚಿಸಿಕೊಳ್ಳಲು ಧ್ಯಾನ ಮಾಡುವುದು ಒಳಿತು.ಸಿಂಹ: ಕಾರ್ಯಸಾಧನೆಗೆ ಅಕ್ಕಪಕ್ಕದವರ ಅಢ್ಡಗಾಉ ಅಥವಾ ಸಹೋದ್ಯೋಗಿಗಳ ನಿರ್ಧಾರಗಳಿಂದ ಸಮಸ್ಯೆಯಾಗಲಿದೆ.ಕನ್ಯಾ: ಧಾರ್ಮಿಕ ಕಾರ್ಯಗಳಿಗೆ ಹಣ ವ್ಯಯ ಮಾಡುವಿರಿ. ಮಕ್ಕಳಿಂದ ಸಂತೋಷ ಸಿಗಲಿದೆ.
ತುಲಾ: ಉದ್ಯೋಗ ನಿಮಿತ್ತ ಪ್ರಯಾಣ ಮಾಡುವಿರಿ. ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಭೇಟಿ ಮಾಡಿ.ವೃಶ್ಚಿಕ:ಹಿಂಜರಿಕೆ ಮತ್ತು ಭಯದ ಸ್ವಭಾವ ಕಾರ್ಯಕ್ಷೇತ್ರದಲ್ಲಿ ಹಿನ್ನಡೆಗೆ ಕಾರಣವಾಗಲಿದೆ.ಧನುಸ್ಸು: ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಲಾಭದಾಯಕವಾದ ದಿನ.
ಮಕರ: ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ. ನೀವಾಡುವ ಮಾತಿನಲ್ಲಿ ಹಿಡಿತವಿರಲಿ.ಕುಂಭ: ಕಚೇರಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಒತ್ತಡ ಹೆಚ್ಚಾಗಲಿದೆ. ವಾಹನ ಚಾಲನೆಯಲ್ಲಿ ಜಾಗ್ರತೆ.ಮೀನ: ವೃತ್ತಿ ಬದಲಾವಣೆ ಮಾಡುವ ಬಗ್ಗೆ ಪತ್ನಿಯೊಂದಿಗೆ ಮತ್ತು ಸ್ನೇಹಿತರೊಂದಿಗೆ ಚರ್ಚಿಸಿ ತೀರ್ಮಾನಿಸಿ.