ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-09-2024)

ನಿತ್ಯ ನೀತಿ :ಮನಸ್ಸು ಎಲ್ಲಕ್ಕೂ ಮೂಲ. ಅದನ್ನು ಸರಿಪಡಿಸಿಕೊಳ್ಳದ ಹೊರತು ಇನ್ನಾವುದೂ ಸರಿಯಾಗದು.
ಪಂಚಾಂಗ : ಸೋಮವಾರ , 16-09-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಧನಿಷ್ಠಾ / ಯೋಗ: ಸುಕರ್ಮಾ / ಕರಣ: ಗರಜೆ
ಸೂರ್ಯೋದಯ – ಬೆ.06.09ಸೂರ್ಯಾಸ್ತ – 06.20ರಾಹುಕಾಲ – 7.30-9.00ಯಮಗಂಡ ಕಾಲ – 10.30-12.00ಗುಳಿಕ ಕಾಲ – 1.30-3.00
ರಾಶಿಭವಿಷ್ಯ :ಮೇಷ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.ವೃಷಭ: ಇತರರ ಮಾತು ಕೇಳಿ ನಿರ್ಧಾರ ಕೈಗೊಳ್ಳದಿರುವುದು ಒಳಿತು.ಮಿಥುನ: ವ್ಯವಹಾರದಲ್ಲಿನ ಯೋಜನೆ ಹಾಗೂ ಅವುಗಳ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.
ಕಟಕ: ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆ ಯಾಗುವ ಸಾಧ್ಯತೆಗಳಿವೆ.ಸಿಂಹ: ನೀವು ಕಂಡ ಕನಸು ಗಳಿಗೆ ಹಿರಿಯರ ಬೆಂಬಲ ಸಿಗಲಿದೆ. ಮಕ್ಕಳಿಂದ ಸಂತೋಷ ಉಂಟಾಗುವುದು.ಕನ್ಯಾ: ಹಿತಶತ್ರುಗಳಿಂದ ದೂರವಿದ್ದರೆ ಒಳಿತು.
ತುಲಾ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.ವೃಶ್ಚಿಕ: ಹಿರಿಯರ ಆಶೀರ್ವಾದ ಸದಾ ಕಾಲ ನಿಮ್ಮೊಂದಿಗಿರುತ್ತದೆ. ಉದ್ಯೋಗದಲ್ಲಿ ಲಾಭ ಸಿಗಲಿದೆ.ಧನುಸ್ಸು: ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿರು ತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದಿರಿ.
ಮಕರ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ.ಕುಂಭ: ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ. ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ.ಮೀನ: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.