ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-09-2024)
'  - 23-09-2024
ನಿತ್ಯ ನೀತಿ: ಪಡೆದುಕೊಳ್ಳುವುದಕ್ಕಿಂತ ಉಳಿಸಿಕೊಳ್ಳುವುದು ಮುಖ್ಯ. ಹುಡುಕುವುದಕ್ಕಿಂತ ಸಿಕ್ಕಿರುವುದನ್ನು ಕಳೆದು ಹೋಗದಂತೆ ಕಾಪಾಡಿಕೊಳ್ಳುವುದು ಮುಖ್ಯ.
ಪಂಚಾಂಗ : ಸೋಮವಾರ , 23-09-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ರೋಹಿಣಿ / ಯೋಗ: ಸಿದ್ಧಿ / ಕರಣ: ವಿಷ್ಟಿ
ಸೂರ್ಯೋದಯ – ಬೆ.06.09ಸೂರ್ಯಾಸ್ತ – 06.15ರಾಹುಕಾಲ – 7.30-9.00ಯಮಗಂಡ ಕಾಲ – 10.30-12.00ಗುಳಿಕ ಕಾಲ – 1.30-3.00
ರಾಶಿಭವಿಷ್ಯ:ಮೇಷ: ತಂದೆಯಿಂದ ನಿಮ್ಮ ವೃತ್ತಿಗೆ ಸಹಾಯ ದೊರೆಯುತ್ತದೆ. ಶತ್ರುಗಳ ಕಾಟ ತಪ್ಪಲಿದೆ.ವೃಷಭ: ಮನೆ ನಿರ್ಮಾಣ ಕೆಲಸದಲ್ಲಿರುವ ಅಡೆತಡೆಗಳು ಸಹೋದರರು ನೀಡುವ ಸಲಹೆ ಗಳಿಂದ ದೂರವಾಗಲಿವೆ.ಮಿಥುನ: ಪ್ರತಿ ಕೆಲಸವನ್ನೂ ತಾಳ್ಮೆಯಿಂದ ನಿಭಾಯಿಸಿ. ಕಚೇರಿಯಲ್ಲಿ ವಿನಾಕಾರಣ ಕಿರುಕುಳ ಉಂಟಾದೀತು.
ಕಟಕ: ಮನೆಯಲ್ಲಿ ಸಂತಸದ ವಾತಾವರಣ ಮೂಡಲಿದೆ.ಸಿಂಹ: ಹಿರಿಯರ ನೆರವಿನಿಂದ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.ಕನ್ಯಾ:ದೂರ ಪ್ರಯಾಣ ಮಾಡುವುದರಿಂದ ಲಾಭ ದಾಯಕವಾಗಿ ರುತ್ತದೆ.
ತುಲಾ: ಬರುವ ಅವಕಾಶ ಸದುಪಯೋಗಪಡಿಸಿ ಕೊಳ್ಳಿ.ವೃಶ್ಚಿಕ: ಒಳ್ಳೆಯ ಜನ ರೊಂದಿಗೆ ಸಂಪರ್ಕ ಹೊಂದುವಿರಿ. ಬುದ್ಧಿವಂತಿಕೆ ಯಿಂದ ಕೆಲಸದಲ್ಲಿ ಯಶಸ್ಸು ಸಾಽಸುವಿರಿ.ಧನುಸ್ಸು: ಮಹಿಳೆಯರು ಮೋಸ ಹೋಗ ಬಹುದು. ಎಚ್ಚರಿಕೆಯಿಂದ ವ್ಯವಹರಿಸಿದರೆ ಒಳಿತು.
ಮಕರ: ತಂದೆ-ತಾಯಿಯ ಆರೋಗ್ಯದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.ಕುಂಭ: ಉದ್ಯೋಗ ಸ್ಥಳದಲ್ಲಿ ಮೇಲಽಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.ಮೀನ: ಗುರು-ಹಿರಿಯರೊಂದಿಗೆ ಸಮಾಲೋಚನೆ ನಡೆಸುವಿರಿ. ಸಮಸ್ಯೆಗಳು ಬಗೆಹರಿಯಲಿವೆ.