ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-09-2024)


ನಿತ್ಯ ನೀತಿ :ಬದುಕಿನ ಅರ್ಥ ಹುಡುಕುತ್ತಾ ಹೊರಟ ನನಗೆ ಅರ್ಥವಾಗಿದ್ದು ಕೆಲವೊಂದರ ಅರ್ಥ ಹುಡುಕಬಾರದು. ಸುಮನೆ ಬದುಕಬೇಕು ಎಂದು.
ಪಂಚಾಂಗ : ಗುರುವಾರ , 12-09-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ /ತಿಥಿ: ನವಮಿ / ನಕ್ಷತ್ರ: ಮೂಲಾ / ಯೋಗ: ಆಯುಷ್ಮಾನ್‌ / ಕರಣ: ಬಾಲವ
ಸೂರ್ಯೋದಯ – ಬೆ.06.09ಸೂರ್ಯಾಸ್ತ – 06.23ರಾಹುಕಾಲ – 1.30-3.00ಯಮಗಂಡ ಕಾಲ – 6.00-7.30ಗುಳಿಕ ಕಾಲ – 9.00-10.30
ರಾಶಿಭವಿಷ್ಯ :ಮೇಷ: ಆದಾಯ ಹೆಚ್ಚಾಗಿರುವುದರಿಂದ ಯಾವುದೇ ತೊಂದರೆ ಇರುವುದಿಲ್ಲ. ಮಹಿಳೆಯರಿಗೆ ಶುಭ ದಿನ.ವೃಷಭ: ಹಲವಾರು ಸವಾಲುಗಳನ್ನು ಎದುರಿಸಬೇಕಾದ ಸಂದರ್ಭ ಎದುರಾಗಲಿದೆ.ಮಿಥುನ: ತೈಲ ಮಾರಾಟದಿಂದ ಲಾಭ ಸಿಗಲಿದೆ. ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ ದಿನ.
ಕಟಕ:ಅಂದುಕೊಂಡ ಕೆಲಸ-ಕಾರ್ಯಗಳಲ್ಲಿ ಒಂದಷ್ಟು ಶ್ರಮವಿದ್ದರೂ ತಕ್ಕ ಪ್ರತಿಫಲ ಸಿಗಲಿದೆ.ಸಿಂಹ: ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುವಲ್ಲಿ ಹೆಚ್ಚು ಸಮಯ ಕಳೆಯುವಿರಿ.ಕನ್ಯಾ:ಹಿರಿಯರ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವುದು ಸೂಕ್ತ.
ತುಲಾ: ಆರೋಗ್ಯ ಸಮಸ್ಯೆ ಗಳನ್ನು ಎದುರಿಸಲು ಹೆಚ್ಚು ವ್ಯಾಯಾಮ ಮಾಡಬೇಕು.ವೃಶ್ಚಿಕ: ಹಣ ಉಳಿತಾಯ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸಿ.ಧನುಸ್ಸು: ಸುಲಭವಾಗಿ ಜೀರ್ಣವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಿ.
ಮಕರ: ವಿವಾಹ ವಿಚಾರದಲ್ಲಿ ಅನಿರೀಕ್ಷಿತ ಬದಲಾವಣೆ ಯಾಗಲಿದೆ. ಆಹಾರ ಕ್ರಮದಲ್ಲಿ ಜಾಗ್ರತೆ ವಹಿಸಿ.ಕುಂಭ: ನೌಕರರಿಗೆ ಉದ್ಯೋಗದಲ್ಲಿನ ಹೊಸ ವ್ಯವಸ್ಥೆಯಿಂದಾಗಿ ಮನಸ್ಸಿಗೆ ಸಂತಸ ಸಿಗಲಿದೆ.ಮೀನ: ಮಾತು ಕಡಿಮೆ ಆಡಿದಷ್ಟು ಒಳಿತು.