ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-10-2023)
ನಿತ್ಯ ನೀತಿ :ಇಂದು ನಿಮ್ಮ ಹೆತ್ತವರನ್ನು ನೀವು ಹೇಗೆ ಕಾಣುತ್ತೀರಿ ಎಂಬುದರ ಆಧಾರದ ಮೇಲೆ, ನಾಳೆ ನಿಮ್ಮ ಮಕ್ಕಳು ನಿಮ್ಮನ್ನು ಕಾಣುತ್ತಾರೆ.
ಪಂಚಾಂಗ ಬುಧುವಾರ 18-10-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಋತು: ಶರದ್ / ಮಾಸ:ಆಶ್ವಯುಜ / ಪಕ್ಷ: ಶುಕ್ಲ / ತಿಥಿ: ಚತುರ್ಥಿ / ನಕ್ಷತ್ರ: ವಿಶಾಖ / ಯೋಗ: ವಿಷ್ಕಂಭ / ಕರಣ: ಬಾಲವ
ಸೂರ್ಯೋದಯ : ಬೆ.06.11ಸೂರ್ಯಾಸ್ತ : 5.59ರಾಹುಕಾಲ : 12.00-1.30ಯಮಗಂಡ ಕಾಲ : 7.30-9.00ಗುಳಿಕ ಕಾಲ: 10.30-12.00
ರಾಶಿ ಭವಿಷ್ಯಮೇಷ: ಕೆಲ ದಿನಗಳಿಂದ ನೆನೆಗುದಿಗೆ ಬಿದ್ದ ಕಾರ್ಯಗಳಿಗೆ ಮತ್ತೊಮ್ಮೆ ವಿಘ್ನ ಎದುರಾಗಬಹುದು.ವೃಷಭ: ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾನೂನು ವಿಷಯದಲ್ಲಿ ಹೆಚ್ಚಿನ ಸಲಹೆ ಪಡೆಯಿರಿ.ಮಿಥುನ: ಪ್ರಾಮಾಣಿಕತೆಯಿಂದ ದುಡಿಯುವ ನಿಮ್ಮ ಮೇಲೆ ಮೇಲಧಿಕಾರಿಗಳಿಗೆ ಭರವಸೆ ಮೂಡಲಿದೆ.
ಕಟಕ: ಕೆಲವು ಯೋಜನೆಗಳ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ನೆರೆಹೊರೆಯವರ ಸಲಹೆ ಪಡೆಯಿರಿ.ಸಿಂಹ: ಸಂಪನ್ಮೂಲ ವೃದ್ಧಿ ಗಾಗಿ ಹೊಸ ಮಾರ್ಗ ಕಂಡು ಕೊಳ್ಳುವಲ್ಲಿ ಯಶಸ್ಸು ಸಿಗಲಿದೆ.ಕನ್ಯಾ: ವಿದ್ಯಾರ್ಥಿಗಳಿಗೆ ವಿದ್ಯೆಯ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ತುಲಾ: ಶುಭ ಸಮಾರಂಭಗಳು ನಡೆಯುವುದರಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.ವೃಶ್ಚಿಕ: ಜವಾಬ್ದಾರಿ ಸ್ವೀಕರಿಸುವ ಮೊದಲು ಅದನ್ನು ನಿಭಾಯಿಸುವ ಬಗ್ಗೆ ಯೋಚಿಸಿ.ಧನುಸ್ಸು: ಮೇಲಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸುವುದರಿಂದ ತೊಂದರೆಯಾಗಲಿದೆ.
ಮಕರ: ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಮಾಡದಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.ಕುಂಭ: ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರುವುದು ಬಹಳ ಒಳ್ಳೆಯದು.ಮೀನ: ಎಲ್ಲ ಕೆಲಸ-ಕಾರ್ಯಗಳಿಗೂ ವಿರಾಮ ಹೇಳಿ ಪತ್ನಿ-ಮಕ್ಕಳೊಂದಿಗೆ ಸಮಯ ಕಳೆಯಿರಿ.