ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-10-2023)
ನಿತ್ಯ ನೀತಿ :ಸಂತೋಷದ ವ್ಯಾಖ್ಯಾನವನ್ನು ತಿಳಿಯಲು ದುಃಖದ ಪಾಠಗಳನ್ನು ಕಲಿಯಬೇಕು.
ಪಂಚಾಂಗ ಶನಿವಾರ 21-10-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಋತು: ಶರದ್ /ಮಾಸ:ಆಶ್ವಯುಜ / ಪಕ್ಷ: ಶುಕ್ಲ / ತಿಥಿ: ಸಪ್ತಮಿ / ನಕ್ಷತ್ರ: ಮೂಲ
ಸೂರ್ಯೋದಯ : ಬೆ.06.10ಸೂರ್ಯಾಸ್ತ : 5.59ರಾಹುಕಾಲ : 9.00-10.30ಯಮಗಂಡ ಕಾಲ : 1.30-3.00ಗುಳಿಕ ಕಾಲ : 6.00- 7.30
ರಾಶಿ ಭವಿಷ್ಯಮೇಷ: ಐಷಾರಾಮಿ ಜೀವನ ನಿರ್ವಹಣೆ ಮಾಡುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ.ವೃಷಭ: ವ್ಯವಹಾರದಲ್ಲಿ ಸಣ್ಣಪುಟ್ಟ ನಷ್ಟ ಸಂಭವಿಸಲಿದೆ. ದುರಭ್ಯಾಸಗಳಿಂದ ದೂರವಿರಿ.ಮಿಥುನ: ಉದ್ಯೋಗದಲ್ಲಿ ಉತ್ತಮ ಹೆಸರು ಗಳಿಸುವ ನಿಮ್ಮ ಪ್ರಯತ್ನಕ್ಕೆ ಶುಭ ಫಲ ದೊರೆಯಲಿದೆ.
ಕಟಕ: ಉದ್ಯಮಿಗಳು ಕೆಲಸಗಾರರೊಂದಿಗೆ ಯಾವುದೇ ಮನಸ್ತಾಪ ಮಾಡಿಕೊಳ್ಳದಿರಿ.ಸಿಂಹ: ಅನ್ಯರ ಮಾತಿನ ಬಗ್ಗೆ ಅತಿಯಾದ ವಿಶ್ವಾಸ ಬೇಡ.ಕನ್ಯಾ: ಕೆಲಸಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಅಧಿಕಾರಿ ಗಳಿಂದ ಸಂದೇಶ ಬರಲಿದೆ.
ತುಲಾ: ನಿಮ್ಮ ಹಾಸ್ಯದಿಂದ ಬೇರೆಯವರಿಗೆ ನೋವುಂಟಾಗದಂತೆ ನೋಡಿಕೊಳ್ಳಿ.ವೃಶ್ಚಿಕ: ಪಾಲುದಾರಿಕೆ ವ್ಯವಹಾರದಲ್ಲಿ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ.ಧನುಸ್ಸು: ನಿರೀಕ್ಷಿಸಿದ ಕಾರ್ಯಗಳು ನೆರವೇರಿ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಮಕರ: ವೈದ್ಯವೃತ್ತಿಯಲ್ಲಿರುವವರು ಅಧಿಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.ಕುಂಭ: ನಿಮ್ಮ ಆತ್ಮಬಲ, ದೈವಬಲದಿಂದ ಕೆಲಸದಲ್ಲಿ ಯಶಸ್ಸು ದೊರೆಯಲಿದೆ.ಮೀನ: ಹೂವು, ಹಣ್ಣು ವ್ಯಾಪಾರದಲ್ಲಿ ವಿಶೇಷ ಲಾಭ ದೊರೆಯಲಿದೆ. ತಾಳ್ಮೆಯಿಂದ ಇರಿ.