ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-10-2023)
ನಿತ್ಯ ನೀತಿ :ಶಕ್ತಿಯೆಲ್ಲಾ ನಿಮ್ಮೊಳಗೇ ಇದೆ; ನೀವು ಏನು ಬೇಕಾದರೂ ಮಾಡಬಲ್ಲಿರಿ, ಎಲ್ಲವನ್ನೂ ಮಾಡಬಲ್ಲಿರಿ.
ಪಂಚಾಂಗ : ಸೋಮವಾರ, 23-10-2023ಶೋಭಕೃತ್ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷತಿಥಿ: ನವಮಿ / ನಕ್ಷತ್ರ: ಶ್ರವಣ / ಯೋಗ: ಶೂಲ / ಕರಣ: ಬಾಲವ-ತೈತಿಲ
ಸೂರ್ಯೋದಯ : ಬೆ.06.11ಸೂರ್ಯಾಸ್ತ : 05.57ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ : 1.30-3.00
ಇಂದಿನ ರಾಶಿಭವಿಷ್ಯ :ಮೇಷ: ಹಿರಿಯರು ಮತ್ತು ಸಜ್ಜನರನ್ನು ಗೌರವಿಸುವುವಿಸುವುದರಿಂದ ಕೆಲಸದಲ್ಲಿ ಉತ್ತಮ ಯಶಸ್ಸು ಸಿಗಲಿದೆ.ವೃಷಭ: ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ.ಮಿಥುನ: ಧಾರ್ಮಿಕ ಕೆಲಸ-ಕಾರ್ಯಗಳಲ್ಲಿ ಭಾಗವಹಿ ಸುವಿರಿ. ದೂರ ಪ್ರಯಾಣ ಮಾಡಬೇಕಾಗಬಹುದು.
ಕಟಕ:ನಿಮ್ಮ ಕೆಲಸಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಇಂದು ಸಾಧ್ಯವಾಗುತ್ತದೆ.ಸಿಂಹ: ಒಡಹುಟ್ಟಿದವ ರೊಂದಿಗಿನ ಸಂಬಂಧ ಸುಧಾ ರಿಸುತ್ತದೆ. ವೃತ್ತಿ ಕ್ಷೇತ್ರದಲ್ಲಿ ಬಯಸಿದ ಯಶಸ್ಸು ಸಿಗಲಿದೆ.ಕನ್ಯಾ:ಸುಲಭವಾಗಿ ಜೀರ್ಣ ವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಿ.
ತುಲಾ: ಸಹೋದ್ಯೋಗಿಗೆ ಸಹಾಯ ಮಾಡುವುದ ರಿಂದ ನಿಮ್ಮ ಒಳ್ಳೆಯ ತನ ಎಲ್ಲರಿಗೂ ತಿಳಿಯಲಿದೆ.ವೃಶ್ಚಿಕ: ಹಿತವಾದ ಮಾತುಗಳಿಂದ ಸಂಗಾತಿ ಅಥವಾ ಪ್ರೀತಿಪಾತ್ರರನ್ನು ಮೆಚ್ಚಿಸಲು ಪ್ರಯತ್ನಿಸುವಿರಿ.ಧನುಸ್ಸು: ಉದ್ಯಮಿಗಳು ತಮ್ಮ ಸಹೋದ್ಯೋಗಿ ಗಳೊಂದಿಗೆ ಭವಿಷ್ಯದ ಯೋಜನೆಗಳ ಬಗ್ಗೆ ಚಿಂತಿಸಿ.
ಮಕರ: ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ.ಕುಂಭ: ಸ್ಥಗಿತಗೊಂಡ ಕೆಲಸವನ್ನು ಸ್ವಲ್ಪ ಹಣ ಖರ್ಚು ಮಾಡುವ ಮೂಲಕ ಪೂರ್ಣಗೊಳಿಸಬಹುದು.ಮೀನ: ವಾಹನ ಖರೀದಿಸುವ ಯೋಚನೆಯನ್ನು ಮುಂದಕ್ಕೆ ಹಾಕುವುದು ಒಳ್ಳೆಯದು.