ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-10-2023)
ನಿತ್ಯ ನೀತಿ :ಎಲ್ಲಿ ಪ್ರೇಮವಿರುವುದೋ ಅಲ್ಲಿ ಸ್ವಾರ್ಥವಿರಬಾರದು. ಅಹಂಕಾರವಿರಬಾರದು. ಪರಿಶುದ್ಧವಾದ ಭಗವತ್ಪ್ರೇಮವಿರಬೇಕು.
ಪಂಚಾಂಗ ಮಂಗಳವಾರ 17-10-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಋತು: ಶರದ್ / ಮಾಸ:ಆಶ್ವಯುಜ / ಪಕ್ಷ: ಶುಕ್ಲ / ತಿಥಿ: ಬಿದಿಗೆ / ನಕ್ಷತ್ರ: ಸ್ವಾತಿ / ಯೋಗ: ವಿಷ್ಕಂಭ / ಕರಣ: ಬಾಲವ
ಸೂರ್ಯೋದಯ : ಬೆ.06.11ಸೂರ್ಯಾಸ್ತ : 5.59ರಾಹುಕಾಲ : 3.00-4.300ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30
ರಾಶಿ ಭವಿಷ್ಯಮೇಷ: ಹಿರಿಯ ಅಧಿಕಾರಿಗಳು, ಕುಟುಂಬ ದವರು ನಿಮ್ಮ ವ್ಯಕ್ತಿತ್ವವನ್ನು ಪ್ರಶಂಸಿಸುವರು.ವೃಷಭ: ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ.ಮಿಥುನ: ಅಧಿಕಾರಿಗಳೊಂದಿಗಿನ ವೈಮನಸ್ಯ ದೂರ ಮಾಡಿಕೊಂಡರೆ ವೃತ್ತಿಪರ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಲು ಅನುಕೂಲವಾಗಿರುತ್ತದೆ.
ಕಟಕ: ಮನೆಯ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ನಿಭಾಯಿಸಬೇಕು.ಸಿಂಹ: ಕೆಲಸ-ಕಾರ್ಯಗಳು ಸಂಪೂರ್ಣವಾಗಿ ಕಾರ್ಯಗತ ಗೊಳ್ಳಬಹುದು ಮತ್ತು ಅವು ನಿಮಗೆ ಅನುಕೂಲಕರ ಫಲಿತಾಂಶ ತಂದು ಕೊಡಲಿವೆ.ಕನ್ಯಾ:ಆಸ್ತಿ, ಅಪಾರ್ಟ್ ಮೆಂಟ್ ಖರೀದಿಯಲ್ಲಿ ಅಧಿಕ ಹಣ ಹೂಡಿಕೆ ಮಾಡುವಿರಿ.
ತುಲಾ: ನಿಮ್ಮ ಶ್ರಮ ಮತ್ತು ಅದೃಷ್ಟವು ಎಲ್ಲಾ ರೀತಿಯಲ್ಲೂ ಬೆಂಬಲ ನೀಡುತ್ತದೆ.ವೃಶ್ಚಿಕ: ಹೊಸ ಜನರನ್ನು ಭೇಟಿ ಮಾಡುವುದರಿಂದ ಹಲವಾರು ಪ್ರಯೋಜನವಾಗಲಿವೆ.ಧನುಸ್ಸು: ಅಣ್ಣ-ತಮ್ಮಂದಿರು ನಿಮ್ಮ ವ್ಯವಹಾರಗಳಿಗೆ ಸಾಕಷ್ಟು ಸಹಾಯ ಮಾಡುವರು.
ಮಕರ: ಕಾರ್ಯಸಾಧನೆಗಾಗಿ ಪ್ರಯಾಣ ಮಾಡಬೇಕಾಗಬಹುದು. ಅಧಿಕ ಖರ್ಚುಕುಂಭ: ವ್ಯವಹಾರದಲ್ಲಿ ಹೂಡಿಕೆ ಮಾಡುವ ಮುನ್ನ ನಾಲ್ಕು ಬಾರಿ ಆಲೋಚಿಸುವುದು ಸೂಕ್ತ.ಮೀನ: ಯಾವುದೇ ಕಾರ್ಯ ಕೈಗೊಂಡರೂ ಹೆಜ್ಜೆ ಹೆಜ್ಜೆಗೂ ಅಡೆತಡೆ ಎದುರಾಗಲಿದೆ.