ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-11-2023)
ನಿತ್ಯ ನೀತಿ :ಪ್ರಪಂಚದ ಅತೀ ದೊಡ್ಡ ಗುರು ಎಂದರೆ ಸಮಯ. ಏಕೆಂದರೆ ಅದು ಎಲ್ಲವನ್ನೂ ಕಲಿಸುತ್ತದೆ.
ಪಂಚಾಂಗ ಬುಧವಾರ 01-11-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಮೃಗಶಿರಾ / ಯೋಗ: ಪರಿಘ / ಕರಣ: ಭವ
ಸೂರ್ಯೋದಯ : ಬೆ.06.13ಸೂರ್ಯಾಸ್ತ ; 05.53ರಾಹುಕಾಲ : 12.00-1.30ಯಮಗಂಡ ಕಾಲ ; 7.30-9.00ಗುಳಿಕ ಕಾಲ : 10.30-12.00
ಬಿಜೆಪಿ ಹೇಳಿದ ತಕ್ಷಣ ಸರ್ಕಾರ ಬೀಳಲ್ಲ : ಸಿಎಂ ಸಿದ್ದರಾಮಯ್ಯ
ರಾಶಿ ಭವಿಷ್ಯಮೇಷ: ಪಿತ್ರಾರ್ಜಿತ ಆಸ್ತಿ ತಗಾದೆಯಾದರೂ ಅನು ಕೂಲವಾಗಲಿದೆ. ಮಿತ್ರರಿಂದ ಸಹಾಯ ಸಿಗಲಿದೆ.ವೃಷಭ: ಆಸ್ತಿ, ಅಪಾರ್ಟ್‍ಮೆಂಟ್ ಖರೀದಿಯಲ್ಲಿ ಅಧಿಕ ಹಣ ಹೂಡಿಕೆ ಮಾಡುವಿರಿ.ಮಿಥುನ: ಆತ್ಮೀಯರ ಸಹಾಯ ಸಿಗಲಿದೆ. ವಸ್ತ್ರ ವಿನ್ಯಾಸಕರಿಗೆ ಅಧಿಕ ಲಾಭ ದೊರೆಯಲಿದೆ.
ಕಟಕ: ಹಳೆ ವಾಹನ ಖರೀದಿಸುವುದರಿಂದ ರಿಪೇರಿ ವೆಚ್ಚ ಹೆಚ್ಚಾಗಬಹುದು. ವ್ಯಾಪಾರದಲ್ಲಿ ನಷ್ಟ.ಸಿಂಹ: ಸರ್ಕಾರದಿಂದ ಆಗಬೇಕಾದ ಕೆಲಸಗಳು ಪ್ರಭಾವಿಗಳ ಮಧ್ಯಸ್ಥಿಕೆ ಯಿಂದ ನಡೆಯಲಿವೆ.ಕನ್ಯಾ: ಸದ್ಯಕ್ಕೆ ಕೆಲಸದ ಬದಲಾವಣೆ ಬೇಡ. ಆಹಾರ ಪದ್ಧತಿಯಲ್ಲಿ ಸರಿಯಾದ ನಿಯಮ ಪಾಲಿಸಿ.
ತುಲಾ: ಮನೆ ಬಗ್ಗೆ ಉದಾ ಸೀನ ತೋರದೆ ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ.ವೃಶ್ಚಿಕ: ಸಣ್ಣ ಪುಟ್ಟ ಅಡಚಣೆಗಳು ಕೆಲಸ-ಕಾರ್ಯ ಗಳಿಗೆ ಅಡ್ಡಿಯನ್ನುಂಟುಮಾಡಲಿವೆ.ಧನುಸ್ಸು: ಮಕ್ಕಳ ಉನ್ನತ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಮಾಡದರಿರುವುದು ಒಳಿತು.
ಮಕರ: ಉನ್ನತ ಸ್ಥಾನಮಾನ ದೊರೆಯಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.ಕುಂಭ: ಹಣದ ಒಳಹರಿವು ಉತ್ತಮವಾಗಿರುತ್ತದೆ.ಮೀನ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯವನ್ನು ಹೊಂದುತ್ತೀರಿ.