ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-11-2023)
ನಿತ್ಯ ನೀತಿ :ಬದುಕು ನಮ್ಮನ್ನು ಎಷ್ಟು ನೋಯಿಸಿದರೂ ನಾವು ಮುಂದೆ ಸಾಗಲೇಬೇಕು, ನಮಗಾಗಿ ಅಲ್ಲದಿದ್ದರೂ ನಮ್ಮವರಿಗಾಗಿ…
ಪಂಚಾಂಗ ಗುರುವಾರ 02-11-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಆರಿದ್ರಾ / ಯೋಗ: ಶಿವ / ಕರಣ: ಕೌಲವ
ಸೂರ್ಯೋದಯ : ಬೆ.06.13ಸೂರ್ಯಾಸ್ತ : 05.53ರಾಹುಕಾಲ : 1.30-3.00ಯಮಗಂಡ ಕಾಲ : 6.00-7.30ಗುಳಿಕ ಕಾಲ : 9.00-10.30
ರಾಶಿ ಭವಿಷ್ಯಮೇಷ: ಸತ್ಕಾರ್ಯಗಳಿಂದಾಗಿ ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ.ವೃಷಭ: ಯಾವುದೇ ವಿಚಾರವಾದರೂ ತೀರ್ಮಾನ ಕೈಗೊಳ್ಳುವ ಮುನ್ನ ಮನೆಯವರೊಂದಿಗೆ ಚರ್ಚಿಸಿ.ಮಿಥುನ: ಮುಖ್ಯ ಕೆಲಸವೊಂದಕ್ಕೆ ಸಲಹೆ ಪಡೆಯಲು ಗಣ್ಯ ವ್ಯಕ್ತಿಯನ್ನು ಸಂಪರ್ಕಿಸುವಿರಿ.
ಕಟಕ: ಉದಾರ ಮನೋಭಾವದಿಂದಾಗಿ ನೆರೆಹೊರೆಯವರ ಗಮನ ಸೆಳೆಯುವಿರಿ.ಸಿಂಹ: ನೂತನ ಯೋಜನೆ ಪ್ರಾರಂಭಿಸಲು ಹಣಕಾಸಿನ ಕೊರತೆ ಇರುವುದಿಲ್ಲ.ಕನ್ಯಾ: ಪೂರ್ವ ನಿಯೋಜಿತ ಕೆಲಸಗಳು ಉತ್ತಮವಾಗಿ ನಡೆಯುವುದರಿಂದನೆಮ್ಮದಿ ಸಿಗಲಿದೆ.
ತುಲಾ: ಹಿರಿಯರ ಮಾತಿ ನಂತೆ ನಡೆದುಕೊಳ್ಳುವುದರಿಂದ ಶುಭ ಫಲ ಸಿಗಲಿದೆ.ವೃಶ್ಚಿಕ: ಮಕ್ಕಳ ಬಗ್ಗೆ ಜವಾ ಬ್ದಾರಿ ವಹಿಸಿ. ಮಕ್ಕಳಿಗೆ ವಸ್ತುಗಳನ್ನು ಖರೀದಿಸುವಿರಿ.ಧನುಸ್ಸು: ಸಣ್ಣ ಪುಟ್ಟ ಅಡಚಣೆಗಳು ಕೆಲಸ-ಕಾರ್ಯ ಗಳಿಗೆ ಅಡ್ಡಿಯನ್ನುಂಟುಮಾಡಲಿವೆ.
ಮಕರ: ಹೂವು, ಹಣ್ಣು, ತರಕಾರಿ, ಹಾಲಿನ ವ್ಯಾಪಾರಿಗಳಿಗೆ ಅಕ ಲಾಭ ಸಿಗಲಿದೆ.ಕುಂಭ: ಮನೆಯಲ್ಲಿ ನಡೆಯಬೇಕಾದ ಶುಭ ಕಾರ್ಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.ಮೀನ: ಮೇಲಧಿಕಾರಿಗಳಿಂದ ಯಾವುದೇ ವಿಷಯವನ್ನು ಮುಚ್ಚಿಡುವ ಪ್ರಯತ್ನ ಮಾಡದಿರಿ.