ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-10-2023)
ನಿತ್ಯ ನೀತಿ: ಇಂದು ಮಾಡಬೇಕಾದ ಕೆಲಸವನ್ನು ನಾಳೆ, ನಾಳೆ ಎಂದು ಮುಂದೂಡಬಾರದು. ಮುಂದೆ ಮಾಡಲು ಬೇಕಾದ ದೇಹಶಕ್ತಿ, ಮನಃಶಕ್ತಿ ಇರುವುದಿಲ್ಲ.
ಪಂಚಾಂಗ ಶನಿವಾರ 28-10-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಹುಣ್ಣಿಮೆ / ನಕ್ಷತ್ರ: ರೇವತಿ / ಯೋಗ: ವಜ್ರ / ಕರಣ: ವಿಷ್ಟಿಸೂರ್ಯೋದಯ ; ಬೆ.06.12ಸೂರ್ಯಾಸ್ತ : 05.55ರಾಹುಕಾಲ : 9.00-10.30ಯಮಗಂಡ ಕಾಲ : 1.30-3.00ಗುಳಿಕ ಕಾಲ : 6.00-7.30
ರಾಶಿ ಭವಿಷ್ಯಮೇಷ: ಸರ್ಕಾರಕ್ಕೆ ಸಂಬಂಧಿಸಿದ ಕೆಲಸ- ಕಾರ್ಯ ಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುತ್ತೀರಿ.ವೃಷಭ: ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರಿಗೆ ಇಂದು ಅತ್ಯುತ್ತಮವಾದ ದಿನ.ಮಿಥುನ: ಪತ್ನಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮುಂದುವರಿಯುತ್ತವೆ.
ಕಟಕ: ಯಶಸ್ವಿಯಾಗುವ ಸಾಧ್ಯತೆಯಿದೆ. ವ್ಯಾಪಾರಸ್ಥರು ಹೆಚ್ಚು ಶ್ರಮಿಸಬೇಕಾಗುತ್ತದೆ.ಸಿಂಹ: ಹೆಚ್ಚಿನ ಖರ್ಚು ಮಾಡುವುದನ್ನು ನಿಯಂತ್ರಿಸಿ.ಕನ್ಯಾ: ಕೆಲಸದ ಹೊರೆ ಕಡಿಮೆಯಾಗುತ್ತದೆ. ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ.
ತುಲಾ: ಚಾತುರ್ಯದಿಂದ ಮಾತುಗಳನ್ನಾಡುವುದ ರಿಂದ ಅಧಿಕ ಹಣ ಸಂಪಾದಿಸಬಹುದು.ವೃಶ್ಚಿಕ: ಕಾಲುಗಳಲ್ಲಿ ನೋವು ಮತ್ತು ಸ್ನಾಯುಗಳ ಅಸ್ವಸ್ಥತೆಧನುಸ್ಸು: ಜಂಕ್‍ಫುಡ್ ತಿನ್ನುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
ಮಕರ: ಹಿರಿಯ ಅಧಿಕಾರಿಗಳೊಂದಿಗೆ ಸಾಮರಸ್ಯ ಮತ್ತು ಸಂಘಟಿತ ಪ್ರಯತ್ನಗಳನ್ನು ಕಾಪಾಡಿಕೊಳ್ಳಿ.ಕುಂಭ: ಮಕ್ಕಳಿಂದಾಗಿ ನೋವುಂಟಾಗಲಿದೆ. ತಂದೆಯ ಆರೋಗ್ಯವನ್ನು ನೋಡಿಕೊಳ್ಳಿ.ಮೀನ: ಸಂಬಳ ಪಡೆಯುವವರು ಕೆಲವು ಲಾಭಗಳನ್ನು ಗಳಿಸುವ ಸಾಧ್ಯತೆಯಿದೆ.