ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-10-2023)
ನಿತ್ಯ ನೀತಿ :ಸಂಸ್ಕಾರ, ಸಂಸ್ಕøತಿಗಳು ನಮ್ಮ ನಡವಳಿಕೆಗಳನ್ನು ತಿದ್ದುವುದಕ್ಕಿವೆಯೇ ಹೊರತು ನಮ್ಮ ಅನ್ಯೋನ್ಯತೆಯನ್ನು ದೂರ ಮಾಡುವುದಕ್ಕಲ್ಲ.
ಪಂಚಾಂಗ ಭಾನುವಾರ 29-10-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಭರಣಿ / ಯೋಗ: ಸಿದ್ಧಿ / ಕರಣ: ಬಾಲವ
ಸೂರ್ಯೋದಯ : ಬೆ.06.12ಸೂರ್ಯಾಸ್ತ : 05.54ರಾಹುಕಾಲ : 4.30-6.00ಯಮಗಂಡ ಕಾಲ : 12.00-1.30ಗುಳಿಕ ಕಾಲ : 3.00-4.30
ರಾಶಿ ಭವಿಷ್ಯಮೇಷ: ಸ್ನೇಹಿತರು ನೀವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುವರು.ವೃಷಭ: ಇತರರೊಂದಿಗೆ ಸೇರಿ ಮಾಡುವ ಕೆಲಸದಲ್ಲಿ ಉತ್ತಮ ಲಾಭ ದೊರೆಯಲಿದೆ.ಮಿಥುನ: ನೆರೆಹೊರೆಯವರೊಂದಿಗಿನ ಸಂಬಂಧ ಸೌಹಾರ್ದಯುತವಾಗಿರುತ್ತದೆ.
ಕಟಕ: ದಿನದ ಆರಂಭ ಉತ್ತಮವಾಗಿರಲಿದೆ. ಕೈಗೊಂಡ ಯಾವುದೇ ಕಾರ್ಯದಲ್ಲಿ ಯಶಸ್ವಿಯಾಗುತ್ತೀರಿ.ಸಿಂಹ: ಸಹೋದ್ಯೋಗಿ ಗಳೊಂದಿಗೆ ಮಾತುಕತೆ ನಡೆಸುವಾಗ ಪದಗಳನ್ನು ಎಚ್ಚರಿಕೆಯಿಂದ ಬಳಸಿ.ಕನ್ಯಾ: ನಿಮ್ಮ ಉಜ್ವಲ ಭವಿಷ್ಯಕ್ಕೆ ಹೊಸ ಸ್ನೇಹ ಸಹಕಾರಿಯಾಗಲಿದೆ.
ತುಲಾ: ಸಂಭಾಷಣೆ ನಡೆಸುವುದರಿಂದ ಉತ್ತಮ ರೀತಿಯ ಸಂಬಂಧಗಳು ರೂಪುಗೊಳ್ಳುತ್ತವೆ.ವೃಶ್ಚಿಕ: ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತೀರಿ.ಧನುಸ್ಸು: ಶ್ರಮ ಮತ್ತು ಅದೃಷ್ಟ ಎಲ್ಲಾ ರೀತಿಯಲ್ಲೂ ಬೆಂಬಲ ನೀಡುತ್ತದೆ.
ಮಕರ: ಹಿರಿಯರು ಹಾಗೂ ಸಜ್ಜನರನ್ನು ಗೌರವಿಸುವಿರಿ. ಉತ್ತಮ ಪ್ರಗತಿ ಸಾಧಿಸುವಿರಿ.ಕುಂಭ: ಹಿಂದೆ ಎದುರಿಸಿದ ತೊಂದರೆಗಳು ನಿವಾರಣೆಯಾಗುತ್ತವೆ ಮತ್ತು ಸ್ಥಗಿತಗೊಂಡ ಕೆಲಸ-ಕಾರ್ಯಗಳು ಸಹ ಪ್ರಗತಿಯಾಗುತ್ತವೆ.ಮೀನ: ಹೊಸ ಉದ್ಯೋಗಗಳು ಮತ್ತು ಉದ್ಯೋಗ ಬದಲಾವಣೆಗೆ ಇದು ಉತ್ತಮ ದಿನವಾಗಿದೆ.