ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-11-2023)
ನಿತ್ಯ ನೀತಿ :ಸಮಸ್ಯೆ ಸೃಷ್ಟಿಸೋ ಸಾವಿರ ಮಂದಿ ಬಂದರೂ ಭರವಸೆ ಅನ್ನೋ ಒಬ್ಬ ಗುರು ಜತೆ ಇದ್ದರೆ ಸಾಕು.
ಪಂಚಾಂಗ : ಭಾನುವಾರ, 12-11-2023ಶೋಭಕೃತ್ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷತಿಥಿ: ಚತುರ್ದಶಿ / ನಕ್ಷತ್ರ: ಸ್ವಾತಿ / ಯೋಗ: ಆಯುಷ್ಮಾನ್ / ಕರಣ: ಚತುಷ್ಪಾದ / ಸೂರ್ಯೋದಯ : ಬೆ.06.17
ಸೂರ್ಯಾಸ್ತ : 05.51ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ : 1.30-3.00
ಇಂದಿನ ರಾಶಿಭವಿಷ್ಯ :ಮೇಷ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯವನ್ನು ಹೊಂದುತ್ತೀರಿ.ವೃಷಭ: ಹಣದ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.ಮಿಥುನ: ಸೋದರ ಸಂಬಂಗಳು ಒಡವೆ ಮಾಡಿಸಿ ಕೊಡುವ ಸಾಧ್ಯತೆ ಇದೆ.
ಕಟಕ: ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವಿರಿ.ಸಿಂಹ: ಅನಾರೋಗ್ಯ ಕಾರಣದಿಂದಾಗಿ ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ. ದೂರ ಪ್ರಯಾಣ ಮಾಡುವಿರಿ.ಕನ್ಯಾ: ಕೌಟುಂಬಿಕ ವಿಷಯದಲ್ಲಿ ಗಂಭೀರ ವಿವಾದ, ಘರ್ಷಣೆಗಳು ನಡೆಯಬಹುದು.
ತುಲಾ: ಕೆಲವು ವ್ಯಾಪಾರ ಯೋಜನೆಗಳನ್ನು ತಡೆ ಹಿಡಿಯಬೇಕಾದ ಸಂದರ್ಭಗಳು ಬರಬಹುದು.ವೃಶ್ಚಿಕ: ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ. ಅಗತ್ಯವಿರುವ ವಸ್ತುಗಳನ್ನು ಖರೀದಿಸಿ.ಧನುಸ್ಸು: ಬಂಧುಗಳಿಂದ ಸಮಸ್ಯೆ ಎದುರಾಗಲಿದೆ. ಹಿತಶತ್ರುಗಳ ಕಾಟ ಹೆಚ್ಚಾಗಲಿದೆ.
ಮಕರ: ಸಂಗಾತಿಗೆ ನಿಮ್ಮೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ.ಕುಂಭ: ಉನ್ನತ ಸ್ಥಾನಮಾನ ದೊರೆಯಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.ಮೀನ: ಹಣಕಾಸು ವ್ಯವಹಾರದಲ್ಲಿ ನಷ್ಟ ತಪ್ಪಿಸುವ ಉದ್ದೇಶದಿಂದ ಜಾಗರೂಕತೆಯಿಂದ ಇರಿ.