ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-11-2023)
ನಿತ್ಯ ನೀತಿ: ದುರ್ಬಲ ಮನಸ್ಸು ಹೊಂದಿದ ವ್ಯಕ್ತಿ ಅನೇಕ ಸಮಸ್ಯೆಗಳಿಗೆ ಕಾರಣನಾಗುತ್ತಾನೆ. ಎಲ್ಲಾ ದುಸ್ಥಿತಿಗೂ, ಸುಸ್ಥಿತಿಗೂ ತಾನೇ ಕರ್ತನು.
ಪಂಚಾಂಗ ಸೋಮವಾರ 20-11-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಧನಿಷ್ಠಾ / ಯೋಗ: ಧ್ರುವ / ಕರಣ: ವಿಷ್ಟಿಸೂರ್ಯೋದಯ: ಬೆ.06.20ಸೂರ್ಯಾಸ್ತ : 05.50ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ : 1.30-3.00
ರಾಶಿ ಭವಿಷ್ಯಮೇಷ: ಅಪರೂಪದ ಅತಿಥಿ ಆಗಮನದಿಂದ ಮನಸ್ಸಿಗೆ ಸಂತೋಷವಾಗಲಿದೆ.ವೃಷಭ: ಬಂಧುಗಳ ಆಗಮನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆರೋಗ್ಯ ಸುಧಾರಣೆಗಾಗಿ ಯೋಗ ಮಾಡಿ.ಮಿಥುನ: ಅನಿರೀಕ್ಷಿತ ತಲೆ ನೋವು ಅಥವಾ ಬೆನ್ನುನೋವು ಕಾಡಲಿದೆ.
ಕಟಕ: ಸಮಾಧಾನಚಿತ್ತ ದಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಕೊಳ್ಳಬಹುದು.ಸಿಂಹ: ದುಡುಕುತನ ಒಳ್ಳೆಯ ದಲ್ಲ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಆಲೋಚಿಸಿ.ಕನ್ಯಾ: ವಿರೋಧಿಗಳೂ ಸಹ ಮೆಚ್ಚುವಂತಹ ಕಾರ್ಯಸಾಧನೆ ಮಾಡುವಿರಿ.
ತುಲಾ: ಜವಾಬ್ದಾರಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ಚಿನ್ನಾಭರಣ ಖರೀದಿಸುವಿರಿ.ವೃಶ್ಚಿಕ: ನೆರೆಹೊರೆಯವರೊಂದಿಗೆ ಯಾವುದೇ ಕಾರಣಕ್ಕೂ ಮನಸ್ತಾಪ ಮಾಡಿಕೊಳ್ಳದಿರಿ.ಧನುಸ್ಸು: ವೈದ್ಯವೃತ್ತಿಯಲ್ಲಿರುವವರು ಅಧಿಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.
ಮಕರ: ಉಲ್ಲಾಸದಿಂದ ಮೈಮರೆಯದಿರಿ. ನಿಮ್ಮನ್ನು ಅತಿಯಾಗಿ ಪ್ರೀತಿಸುವವರೇ ದ್ವೇಷಿಸುವರು.ಕುಂಭ: ವ್ಯವಹಾರದಲ್ಲಿ ಉನ್ನತಿಯಾಗಿ ಸಮಾಜದಲ್ಲಿ ಗೌರವ-ಮನ್ನಣೆ ದೊರೆಯಲಿದೆ.ಮೀನ: ವಸ್ತ್ರ ವಿನ್ಯಾಸಕರಿಗೆ ಅಕ ಲಾಭ ದೊರೆಯಲಿದೆ. ಚಿಂತೆಗೆ ಅವಕಾಶವಿಲ್ಲ.