ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-11-2023)
ನಿತ್ಯ ನೀತಿ: ಜಗತ್ತಿನಲ್ಲಿ ಎಲ್ಲರನ್ನೂ ಸಮಾನವಾಗಿ ನೋಡುವುದು ಗಡಿಯಾರ ಮಾತ್ರ. ಬಡವರಿಗೂ ಒಂದೇ… ಶ್ರೀಮಂತರಿಗೂ ಒಂದೇ…
ಪಂಚಾಂಗ ಶುಕ್ರವಾರ 10-11-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಹಸ್ತ / ಯೋಗ: ವಿಷ್ಕಂಭ / ಕರಣ: ಗರಜೆ
ಸೂರ್ಯೋದಯ : ಬೆ.06.16ಸೂರ್ಯಾಸ್ತ : 05.51ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00
ರಾಶಿ ಭವಿಷ್ಯಮೇಷ: ಬಂಧುಗಳೊಂದಿಗೆ ವೈಮನಸ್ಸು ಉಂಟಾಗ ದಂತೆ ನೋಡಿಕೊಳ್ಳಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.ವೃಷಭ: ವ್ಯಾಪಾರದಲ್ಲಿ ಎಚ್ಚರಿಕೆಯಿಂದಿರಿ. ಉತ್ತಮ ಫಲಿತಾಂಶಗಳನ್ನು ನೋಡಬಹುದು.ಮಿಥುನ: ದಾಂಪತ್ಯದಲ್ಲಿ ಸಮಸ್ಯೆ ಉಂಟಾಗ ಬಹುದು. ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಒಳಿತು.
ಕಟಕ: ದೂರ ಪ್ರಯಾಣ ಮಾಡುವಿರಿ. ಸಹೋದರರೊಂದಿಗೆ ವಾದ-ವಿವಾದಕ್ಕಿಳಿಯದಿರಿ.ಸಿಂಹ: ಕಚೇರಿಯಲ್ಲಿ ಸಮಾಧಾನದಿಂದ ಕಾರ್ಯನಿರ್ವಹಿಸಿ.ಕನ್ಯಾ: ವೃತ್ತಿ ಜೀವನದಲ್ಲಿ ಏರುಪೇರು ಉಂಟಾಗಿ ಗೊಂದಲ ಮೂಡಬಹುದು.
ತುಲಾ: ಮಾನಸಿಕ ಚಾಂಚಲ್ಯ ಕಾಡಲಿದೆ. ವ್ಯಾಪಾರ ಸ್ಥಳದಲ್ಲಿ ಮೈಮರೆಯದೆ ವ್ಯವಹರಿಸಿ.ವೃಶ್ಚಿಕ: ಪರಿಶ್ರಮ ಪಟ್ಟರೂ ಉದ್ದೇಶಿತ ಕಾರ್ಯಗಳಲ್ಲಿ ವಿಫಲವಾಗಲಿದೆ. ಪರರ ವಿಷಯದಲ್ಲಿ ಜಾಗ್ರತೆ ಇರಲಿ.ಧನುಸ್ಸು: ಆಹಾರದ ವಿಷಯದಲ್ಲಿ ಎಚ್ಚರಿಕೆ ವಹಿಸಿ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಸೂಕ್ತ.
ಮಕರ: ವಿನಾಕಾರಣ ಅಧಿಕ ಭಯದಿಂದ ಆತಂಕಕ್ಕೆ ಒಳಗಾಗುವಿರಿ. ಹಣಕಾಸು ವಿಷಯದಲ್ಲಿ ಹುಷಾರಾಗಿರಿ.ಕುಂಭ: ಕುಟುಂಬದಲ್ಲಿ ನೀವು ನಿರೀಕ್ಷಿಸರದೆ ಇರುವ ಘಟನೆಗಳು ಅನಿರೀಕ್ಷಿತವಾಗಿ ನಡೆಯಲಿವೆ.ಮೀನ: ಮುಖಭಂಗವಾಗುವಂಥ ಮಾತುಗಳ ಬಳಕೆ ಮಾಡದಿರುವುದು ಒಳಿತು. ಓದಿನಲ್ಲಿ ಏಕಾಗ್ರತೆ ವಹಿಸಿ.