ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-11-2023)
ನಿತ್ಯ ನೀತಿ :ಮಾನಸಿಕ ಆರೋಗ್ಯ ಸದೃಢವಾಗಬೇಕಾದರೆ ಉತ್ತಮ ಆಲೋಚನೆ, ಧ್ಯಾನ, ಜಪ, ಅನುಷ್ಠಾನ ಮಾತ್ರದಿಂದ ಸ್ವಸ್ಥ ಚಿತ್ತವನ್ನು ಬೆಳೆಸಿಕೊಳ್ಳಬೇಕು.
ಪಂಚಾಂಗ ಮಂಗಳವಾರ 21-11-2023ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ನವಮಿ / ನಕ್ಷತ್ರ: ಶತಭಿಷಾ / ಯೋಗ: ವ್ಯಾಘಾತ / ಕರಣ: ಬಾಲವಸೂರ್ಯೋದಯ : ಬೆ.06.21ಸೂರ್ಯಾಸ್ತ : 05.50ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30
ರಾಶಿ ಭವಿಷ್ಯಮೇಷ: ಉದ್ಯೋಗದ ಸ್ಥಳದಲ್ಲಿ ಹೆಸರು ಗಳಿಸುವಿರಿ. ಸಮಯ-ಸಂದರ್ಭಗಳು ನಿಮ್ಮ ಪರವಾಗಿವೆ.ವೃಷಭ: ಪ್ರೇಮ ಸಂಬಂಧದಲ್ಲಿ ಸೂಕ್ಷ್ಮತೆ ಇರಲಿದೆ. ಅಧಿಕಾರಿ ವರ್ಗಕ್ಕೆ ಉತ್ತಮ ದಿನ.ಮಿಥುನ: ಬೇರೆಯವರೊಂದಿಗೆ ಅನಗತ್ಯವಾಗಿ ವಾದ-ವಿವಾದ ಮಾಡುವುದನ್ನು ನಿಲ್ಲಿಸಿ.
ಕಟಕ: ಕುಟುಂಬದ ಸದಸ್ಯರು ಆಧ್ಯಾತ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುವರು.ಸಿಂಹ: ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು.ಕನ್ಯಾ: ಕಚೇರಿಯಲ್ಲಿ ಅಧಿಕಾರಿ ಗಳೊಂದಿಗೆ ಯಾವುದೇ ರೀತಿಯ ವಾದಕ್ಕೆ ಇಳಿಯಬೇಡಿ.
ತುಲಾ: ಪ್ರಯಾಣ ಕೂಡ ಲಾಭಕರವಾಗಿರುತ್ತದೆ. ಶುಭಸುದ್ದಿ ಕೇಳುವಿರಿ.ವೃಶ್ಚಿಕ: ತಂದೆ-ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ಎಚ್ಚರಿಕೆಯಿಂದಿರಿ.ಧನುಸ್ಸು: ಉದ್ಯೋಗವನ್ನು ಹುಡುಕುತ್ತಿದ್ದರೆ ಸಕಾರಾತ್ಮಕ ಫಲಿತಾಂಶ ಪಡೆಯುವಿರಿ.
ಮಕರ: ಹೆಜ್ಜೆಹೆಜ್ಜೆಗೂ ಶತ್ರುಗಳಿಂದ ಅಡೆತಡೆ ಉಂಟಾಗಿನೆಮ್ಮದಿ ಹಾಳಾಗಬಹುದು.ಕುಂಭ: ಕೆಲಸದ ಸ್ಥಳದಲ್ಲಿ ವ್ಯವಹರಿಸುವಾಗ ಬಹಳ ಜಾಗರೂಕರಾಗಿರುವುದು ಒಳಿತು.ಮೀನ: ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ ಮತ್ತು ಉಳಿತಾಯದ ಕಡೆ ಗಮನ ಹರಿಸುವುದು ಉತ್ತಮ.